ಮಂಗಳೂರು, ಅ.25 : ದಲಿತ ಮೊಗೇರ ಅಪ್ರಾಪ್ತ ಯುವತಿಯ ಅತ್ಯಾಚಾರ ಎಸಗಿ ಅವಳಿಗೆ ಮಗು ನೀಡಿ, ಈಗ ಬಚಾವಾಗಲು ಪೋಲೀಸರಿಂದ ಆಶಾ ಕಾರ್ಯಕರ್ತೆಯರವರೆಗೆ ನಾನಾ ರೀತಿಯ ಪ್ರಭಾವ ಬೀರುತ್ತಿರುವ 72ರ ನಾರಾಯಣ ರೈ ಬಂಧನ ಆಗದಿರುವುದು ಇಲ್ಲಿನ ಕಾನೂನು ಸುವ್ಯವಸ್ಥೆಯು ಬಲ್ಲಿದರ ವಶವಾಗಿರುವುದರ ದ್ಯೋತಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಯಾರೂ ದುಡಿಯವರಿಲ್ಲದ್ದರಿಂದ ಈ ಬಾಲಕಿ 7ನೇ ತರಗತಿಗೆ ಶಾಲೆ ಬಿಟ್ಟು ರೈ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳನ್ನು ಬಲಾತ್ಕಾರ ಮಾಡಿದವನು ಜಮೀನ್ದಾರ. ಬಸುರಾದ ಆಕೆಯಯ ಅಜ್ಜಿ ಅಕ್ಕು ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು.

ಹುಡುಗಿಯ ತಾಯಿಯು  ಹುಶಾರಿಲ್ಲದಿದ್ದ ಆಕೆಯನ್ನು ಪುತ್ತೂರು ಆಸ್ಪತ್ರೆಗೆ ಸೇರಿಸಿದರು. ಅನಂತರ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆ ಸೇರಿದ್ದಾಳೆ ಎಂದು ಲುಕ್ಮಾನ್ ಹೇಳಿದರು.

ಯಾವುದೇ ರೇಪ್ ಮೊಕದ್ದಮೆಯಲ್ಲಿ 164ನೇ ವಿಧಿಯಡಿ ಪೋಲೀಸರು ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ಪಡೆಯಬೇಕು. ಎಲ್ಲ ಮುಗಿದ ಮೇಲೆ ಪೋಲೀಸರು ಇದನ್ನು ಪಡೆಯುವಾಗ ಸಂತ್ರಸ್ತೆಯು ರೇಪ್ ಮಾಡಿದ್ದು ನಾರಾಯಣ ರೈ ಮತ್ತು ಮಗು ಅವರದ್ದು ಎಂದು ಹೇಳಿದ್ದಾಳೆ.

ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಾದ ನಾರಾಯಣ ರೈ ಅವರನ್ನು ಉಳಿಸಲು ವೈದ್ಯರು, ಪೋಲೀಸರು ಎಲ್ಲರೂ ನಾಟಕ ಆಡುತ್ತಿದ್ದಾರೆ. ಇದರ ನಡುವೆ ಕತೆ ಕಟ್ಟಿ ಪ್ರಮೋದ್ ಎಂಬವನನ್ನು ಮತ್ತು ಸಂತ್ರಸ್ತೆಯ ಸಂಬಂಧಿಕನೇ ಆದ ಸತೀಶ್ ಎಂಬುವರು ಸಂತ್ರಸ್ತೆಯನ್ನು ರೇಪ್ ಮಾಡಿದ ಕೇಸು ಹಾಕಿ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಲುಕ್ಮಾನ್ ತಿಳಿಸಿದರು.

ಪೋಲೀಸರು ಸಂತ್ರಸ್ತೆಯನ್ನು ಬೆದರಿಸಿ, ನಿನ್ನನ್ನೇ ಒಳಗೆ ಹಾಕಿ ಬೆನ್ನು ಮುರಿಯುವುದಾಗಿ ಹೇಳಿದ್ದನ್ನು ಆಕೆ ಎಸ್ ಪಿಗೆ ಪತ್ರ ಬರೆದಿದ್ದಾಳೆ. ನಾರಾಯಣ ರೈಯನ್ನು ಬಂಧಿಸಬೇಕು. ಎಫ್‌ಐಆರ್ ಬುಡಮೇಲು ಮಾಡಿದ ಪೋಲೀಸು ಉದಯರವಿ ಮತ್ತಿತರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮೊದಲಾದವರ ಮೇಲೆ ಕೂಡಲೆ ಕ್ರಮ ತೆಗೆದುಕೊಳ್ಳತಕ್ಕದ್ದು ಎಂದು ಲುಕ್ಮಾನ್ ಬಂಟ್ವಾಳ ಒತ್ತಾಯಿಸಿದರು. ಇಲ್ಲದಿದ್ದರೆ ಯುವ ಕಾಂಗ್ರೆಸ್ ಪ್ರತಿಭಟನೆ ಮಾಡುವುದಾಗಿಯೂ ಅವರು ಹೇಳಿದರು. ದಲಿತ ಕಾನೂನು ಬಳಸಲು ಇಷ್ಟು ಕಾಲ ಏಕೆ, ಸಂತ್ರಸ್ತೆಯ ಸಹಿ ನಕಲಿ ಮಾಡಿದ್ದು ಯಾರು? ನಾರಾಯಣ ರೈ ಡಿಎನ್ಎ ಪರೀಕ್ಷೆ ಆಗಬೇಕು ಎಂದೂ ಲುಕ್ಮಾನ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶೈಲಜಾ ಅಮರನಾಥ್, ಅಭಿಶೇಕ್, ರಮಾನಂದ, ಶಾಂತಲಾ ಗಟ್ಟಿ, ಸಫಾನ್, ಬಾಲಕೃಷ್ಣ, ಆನಂದ, ಕೇಶವ, ತೃಪ್ತಿ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.