ಚಿಕ್ಕಂದಿನಲ್ಲಿ ಒಂದು ನಾಯಿಮರಿಗೆ ತುತ್ತು ಅನ್ನ ಹಾಕಿದಷ್ಟೇ ಯಾವತ್ತೂ ನಮ್ನ ಕಂಡರು ಎಲ್ಲಿದ್ದರೂ ನಮ್ಮ ಹಿಂದೆ ಬಂದು ಕೃತಜ್ಞತೆ ಭಾವದಿಂದಿರೊದು...ಆದರೆ ಮನುಷ್ಯನೆಂಬ ಸ್ವಾರ್ಥಿ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡಿರುತ್ತೆವೆ ಇಂದು ದಾರಿಯಲ್ಲಿ ಅಪರಿಚಿತನಂತೆ ಕಣ್ಮಂದೆಯೇ ಹಾದು ಹೋಗತಾರೆ..ನಮ್ಮಿಂದ ಸಹಾಯ ಪಡೆದು ನಮ್ಮ ಕಷ್ಟಕ್ಕೆ ಆಗದಿರುವರು ಜನರು ನಮ್ ಜೀವನದಲ್ಲಿ ಅನೇಕರು ಇದ್ದೆ ಇರತಾರೆ...ನಮ್ಮವರೇ ಎನಿಸಿಕೊಂಡು ನಮ್ಮ ಬೆನ್ನ ಹಿಂದೆ ನಿಂದಿಸುವ ನಾಲಿಗೆಗಳು ನೂರು...ನಮ್ಮ ನೋವು ತುಂಬಿದ ಅಳುವನ್ನು ಅಣುಕಿಸುವವರು ಸಾವಿರಾರು ಜನ.

ಛೇ ಈ ಮನುಷ್ಯನೆಂಬ ಜೀವಿಗೆ ಕೃತಜ್ಞತೆ ಭಾವವೇ ಇಲ್ವಾ. ಒಂದು ಕ್ಷಣ ನಮ್ಮ ಮನಸ್ಸು ಈ ಗೊಂದಲದ ಗೂಡಾಗಿಸಿಕೊಂಡು ಮನಸ್ಸಲ್ಲೆ ಗೊಣಗುತ ಕೂತು ಮನ ಭಾರವಾಗಿಸಿಕೊಳ್ಳುತ್ತೆವೆ. ಒಂದು ಮಾತು ಹೇಳಲಾ..? ಕೊಟ್ಟು ಮರೆತು ಬಿಡಿ, ನೆನಪಿಟ್ಟು ಪ್ರಯೋಜನವಿಲ್ಲ. ಸಹಾಯ ಪಡೆದ ಕೈಗೆ ಮರೆವು ಇರದಿದ್ದರೆ ಕೃತಜ್ಞತೆ ಭಾವದಿಂದ ತನ್ನಿಂದ ಸಹಾಯವಾದರೆ ಇನ್ನೊಬ್ಬರಿಗೆ ಸಹಾಯ ಮಾಡಲಿ. ಕೊಟ್ಟು ಅಪೇಕ್ಷಿಸುವುದು ಬೇಡ ಗೊಣಗುವುದು ಬೇಡ ಪುಟ ತೆರೆದಂತೆ ಹೊಸ ಅಧ್ಯಾಯ...ಹೊಸ ದಿನ ಹೊಸ ಆಲೋಚನೆಗಳ ಜೊತೆ ಹಳೆ ಗೊಡವೆಗಳ ರಗಳೆಯೇ ಇಲ್ಲದೆ ನಿನ್ನೆಗಳ ನಕಾರಾತ್ಮಕತೆಗಳ ಮರೆತು ಬಿಡಬೇಕು.

ಅಷ್ಟಕ್ಕೂ ನಮ್ಮವರೆಂದೆನಿಸಿಕೊಂಡವರು ಜೀವಂತ ಶವಗಳಾಗಿರುತ್ತಾರೆ ಸಂಬಂಧನೇ ಇಲ್ಲದೆ ಇರೊ ಅಪರಿಚಿತ ನಮ್ಮ ನೋವಿಗೆ ಸ್ಪಂದಿಸುವ ಸದೃದಯಿಗಳು ಇರುವಾಗ ಎಲ್ಲೊ ಮಾನವೀಯತೆ ಎಂಬುವುದು ಜೀವಂತವಾಗಿದೇನೊ ಎನಿಸಿಸುತ್ತದೆ... ಕುಂದು ಇರದ ಮನದಲ್ಲಿ ದೇವ ನಲಿವಂತೆ...ನಲಿವ ಮನ ನೋವ ಮರೆಸಿ ನಗುವ ಹಂಚುವನಂತೆ..

ಹಾಗೇ ಯಾವುದೊ ಒಂದು ರೂಪದಲ್ಲಿ ದೇವರು ನಮ್ಮ ಕಷ್ಟಕ್ಕೆ ಸ್ಪಂದಿಸುವನು. ದೇವರಲ್ಲಿ ನಂಬಿಕೆ ಇರಲಿ.

- ಅಂಜಲಿ ಶಿದ್ಲಿಂಗ್