ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಹೆಚ್ಚಿನ ಪ್ರದೇಶಗಳಲ್ಲಿ ಕಳೆದ ಹದಿನೈದು ದಿನಗಳಿಂದ ಅವ್ಯಾಹತವಾಗಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇದೆ. ಫೋನ್ ಮಾಡಿ ಕೇಳಿದರೆ ಒಂದಿಲ್ಲೊಂದು ತಾಂತ್ರಿಕ ಸಬೂಬು ಹೇಳಿ ತಪ್ಪಿಸಿ ಕೊಳ್ಳುವ ಪರಿಪಾಠ ಸಾಮಾನ್ಯವಾಗಿದೆ.
ಆದುದರಿಂದ ಪ್ರತಿಯೊಬ್ಬರೂ ಕತ್ತಲೆಯಲ್ಲಿ ಇಡುವ ಬೋರ್ಡ್ (ಕೆ.ಇ.ಬಿ.) ಎಂದು ಈಗಲೂ ಕರೆಯುತ್ತಾರೆ. ಮೆಸ್ಕಾಂ ಎಂದು ಹೆಸರು ಬದಲಿಸಿ ಕೊಂಡರೂ ಆ ಇಲಾಖೆ ತನ್ನ ಕಾರ್ಯ ವೈಖರಿಯಲ್ಲಿ ಯಾವುದೇ ಬದಲಾವಣೆಯನ್ನು ಈ ತನಕ ತೆಗೆದುಕೊಂಡಿಲ್ಲ. ಸಾರ್ವಜನಿಕ ಸಭೆಗಳನ್ನು ಮಾಡುವಾಗ ಮೂಡುಬಿದಿರೆ ಮೆಸ್ಕಾಂ ನವರು ಹೆಚ್ಚು ಮಂದಿ ಗ್ರಾಹಕರಿಗೆ ಗೊತ್ತಾಗದಂತೆ, ಹೆಚ್ಚು ಪ್ರಚಾರ ನೀಡದೇ ಗ್ರಾಹಕ ಕುಂದು ಕೊರತೆಗಳ ಸಭೆ ಮಾಡಿ ಮುಗಿಸುತ್ತಾರೆ. ಪುರಸಭೆ, ಗ್ರಾಮ ಸಭೆಗಳಲ್ಲಿ ಹೆಚ್ಚಿನ ಆಪಾದನೆಗಳು ಇವರ ಮೇಲೆಯೇ ಇರುತ್ತದೆ. ಆದಾಗ್ಯೂ ಯಾವುದೇ ಪರಿವರ್ತನೆ ಕಂಡು ಬರದೇ ಇರುವುದಕ್ಕೆ ಏನು ಕಾರಣ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?