ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದು ಮಂಗಳೂರಿನ ಎ. ಜೆ. ಆಸ್ಪತ್ರೆಯಲ್ಲಿ ಇದ್ದ ತರುಣಿಯ ಲಿವರ್, ಕಿಡ್ನಿ, ಕಾರ್ನಿಯಾ ಮೊದಲಾದ ಅಂಗಾಂಗಗಳನ್ನು ದಾನ ಮಾಡಿ ಹೆತ್ತವರು ಹಿರಿತನ ಮೆರೆದಿದ್ದಾರೆ.
ಕವನ ಮುಳ್ಳಯ್ಯ ಹಿರೇಮಠ ಅವರು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಬಳಿಯ ಹಳ್ಳೂರದವರು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಹೊನ್ನಾಳಿ ತಾಲೂಕಿನ ಸೊರಟೂರು ಬಳಿ ನಡೆದ ಕಾರು ಎತ್ತಿನ ಗಾಡಿಯ ಡಿಕ್ಕಿಯಲ್ಲಿ ಕವನ ತೀವ್ರ ಗಾಯಗೊಂಡಿದ್ದರು. ಮಂಗಳೂರಿಗೆ ತಂದರೂ ಮಿದುಳು ನಿಷ್ಕ್ರಿಯ ಆಗಿದ್ದುದರಿಂದ ಬದುಕಿದ್ದರೂ ಫಲವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಹೆತ್ತವರು ಶೋಕದ ನಡುವೆಯೇ ಅಂಗಾಂಗ ದಾನ ಮಾಡಿದ್ದಾರೆ.