ಮಂಗಳೂರು: ಜಯಾ ಮೋಟಾರ್ಸ್ ಅಟೋಮೊಬೈಲ್ ಸ್ಪೇರ್ಸ್ ಸಂಸ್ಥೆಯ ಪಾಲುದಾರ, ನಾಯಕ್ ಸರ್ವಿಸಸ್ ಮುಖ್ಯಸ್ಥರಾಗಿದ್ದ ಕೆ.ಗಣೇಶ್ ನಾಯಕ್ (61) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜು, ಕೆನರಾ ಕಾಲೇಜು, ಪಿಯು ಕಾಲೇಜಿನಲ್ಲಿ ಸ್ವಚ್ಛತೆ, ನಿರ್ವಹಣೆಯ ಗುತ್ತಿಗೆದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಗಣ್ಮಾಮ್ ಎಂದೇ ಪರಿಚಿತರಾಗಿದ್ದ ಅವರು ಕಳೆದ ಎರಡು ದಶಕಗಳಿಂದ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಾಯಕ್ ಸ್ಟೋರ್ಸ್ ಸ್ಟೇಶನರಿ ಸಂಸ್ಥೆ ನಡೆಸುವ ಜತೆಗೆ  ತನ್ನ ಸೇವಾ ಕಾರ್ಯಗಳಿಂದಾಗಿ ಜನಾನುರಾಗಿಯಾಗಿದ್ದರು.

ಅಪಾರ ಸಂಖ್ಯೆಯಲ್ಲಿ ಬಂಧು ಮಿತ್ರರು ಊರ್ವ ಮಾರ್ಕೆಟ್ ಪರಿಸರದಲ್ಲಿರುವ ಅವರ ನಿವಾಸಕ್ಕೆ ತೆರಳಿ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

ಚಿತ್ರ: ಕೆ. ಗಣೇಶ್ ನಾಯಕ್