ಉಜಿರೆ: ತಾನು ಯಾವುದೇಕಾರ್ಯ ಪ್ರಾರಂಭಿಸುವಾಗ ಧರ್ಮಸ್ಥಳಕ್ಕೆ ಬಂದು ದೇವರದರ್ಶನ ಮಾಡಿ, ಹೆಗ್ಗಡೆಯವರ ಆಶೀರ್ವಾದ ಪಡೆಯುತ್ತೇನೆ. ಅದೇ ರೀತಿ ಇಂದು ಕೂಡಾ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದಾಗಿ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಹೆಗ್ಗಡೆಯವರ ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಹೆಗ್ಗಡೆಯವರು ತನಗೆ ಶುಭ ಹಾರೈಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ತಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದು ಗೆಲುವಿನ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು.

ಎಲ್ಲರನ್ನೂ ಸಂಪರ್ಕಿಸುವ ವ್ಯವಸ್ಥೆ ಈಗಾಗಲೆ ಮಾಡಿದ್ದು ಸರ್ವರ ಸರ್ವಾಂಗಿಣ ಪ್ರಗತಿಗೆ ತಾನು ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.