ಮಂಗಳೂರು, ಅಕ್ಟೋಬರ್ 15: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಮತದಾನದ ಹಕ್ಕು ಹೊಂದಿರುವ ಜನಸ್ವರಾಜ್ ಸಮಾವೇಶವನ್ನು ಅಡ್ಯಾರ್‌ನಲ್ಲಿ ಇದೇ 19ರಿಂದ ನಡೆಯುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಮೂಡಬಿದಿರೆಯವರು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನಾಲ್ಕು ತಂಡ ರಚಿಸಿದ್ದು ಈಶ್ವರಪ್ಪ ನೇತೃತ್ವದ ತಂಡ ಕರಾವಳಿಯಲ್ಲಿ ದುಡಿಯಲಿದೆ. ಈ ತಂಡದಲ್ಲಿ ಸಚಿವ ಸೋಮಶೇಖರ್, ಸದಾನಂದ ಗೌಡ, ಅರವಿಂದ ಲಿಂಬಾವಳಿ, ಜಿಲ್ಲಾ ಸಚಿವ ಅಂಗಾರ, ಸಚಿವ ಅಶೋಕ ಮೊದಲಾದವರು ಇದ್ದಾರೆ ಎಂದು ಸುದರ್ಶನ್ ಹೇಳಿದರು.

ಎಲ್ಲಾ ಪಂಚಾಯತಿಗಳಲ್ಲಿ ಮತ ಹಾಕಿಸಲು ಇಬ್ಬರ ಪಕ್ಷದ ತಂಡ ಇದೆ. ಪಕ್ಷದ ನಿರ್ದೇಶನದಂತೆ ನಡೆಯುತ್ತೇವೆ. ಒಬ್ಬ ಅಭ್ಯರ್ಥಿ ಆದರೆ ನಮ್ಮಲ್ಲಿ ಹೆಚ್ಚುವರಿ ಮತಗಳಿವೆ. ಇಬ್ಬರು ಅಭ್ಯರ್ಥಿಗಳನ್ನು ಹಾಕಿದರೆ ಅದಕ್ಕೆ ತಕ್ಕಂತೆ ತಂತ್ರ ಹೆಣೆಯಲಾಗುವುದು. ಇನ್ನು ನಮ್ಮ ಮತದಾರರನ್ನು ಯಾರಾದರೂ ಎಗರಿಸಲು ನೋಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಸಹ ಸುದರ್ಶನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್  ಮಿಜಾರ್, ಜಗದೀಶ್ ಶೇಣವ ಮೊದಲಾದವರು ಇದ್ದರು.