ಮುಂಬಯಿ, ಜೂ.27: ಮುಂಬಯಿಯಲ್ಲಿ ಉದ್ಯಮಿಯಾಗಿದ್ದ ಉಡುಪಿ ಮೂಡುಬೆಳ್ಳೆ ಎಡ್ಮೆರ್ ಇಲ್ಲಿನ ಅಲ್ಮೇಡಾ ವಿಲ್ಲಾ ನಿವಾಸಿ ವಲೇರಿಯನ್ ಡಿ'ಅಲ್ಮೇಡಾ (73) ಅಲ್ಪಕಾದ ಅಸ್ವಸ್ಥತೆಯಿಂದ ತನ್ನ ಕಲಾಂಬೋಲಿಯಲ್ಲಿನ ಸ್ವನಿವಾಸದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಮತ್ತು   ಸಂಬಂಧಿಕರನ್ನು ಆಗಲಿದ್ದಾರೆ. 

ಪ್ರಾರ್ಥಿವ  ಶರೀರದ ಅಂತ್ಯಕ್ರಿಯೆಯು ಶುಕ್ರವಾರ (28.ಜೂನ್) ಸಂಜೆ 4:00 ಗಂಟೆಗೆ ಹೋಲಿ ಸ್ಪಿರಿಟ್ ಚರ್ಚ್, ಪ್ಲಾಟ್ ಸಂಖ್ಯೆ 6, ಸೆಕ್ಟರ್ 11, ಕಲಾಂಬೋಲಿ, ನವಿ ಮುಂಬಾಯಿ ಇಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲವು ತಿಳಿಸಿದೆ.