ಮಂಗಳೂರು, ಮೇ 13: ದ. ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿರುವ ಕೋವಿಡ್ ಸೋಂಕಿತರಿಗೆ, ಅವರ ಮನೆಗೆ ತೆರಳಿ, ಆಹಾರ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯವನ್ನು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಇಂದು ಪ್ರಾರಂಭಿಸಿದರು.

ಅವರು ಇಂದು ನಗರದ ಕುಲಶೇಖರದ ಕಣ್ಣಗುಡ್ಡೆ, ಕೊಡಿಯಾಲಬೈಲ್ ಹಾಗೂ ಮಣ್ಣಗುಡ್ಡೆ ಪ್ರದೇಶದಲ್ಲಿರುವ ಕೋವಿಡ್ ಸೋಂಕಿತರಿಗೆ, ಅವರವರ ಮನೆಗೆ ತೆರಳಿ ಕಿಟ್ ಗಳನ್ನು ವಿತರಿಸಿ, ಅವರ ಕುಟುಂಬದವರಿಂದ ಸೋಂಕಿತರ ಮಾಹಿತಿಯನ್ನು ಪಡೆದು, ಅವರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಸಿಟಿ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಪಕ್ಷದ ಮುಖಂಡರುಗಳಾದ ಟಿ. ಹೊನ್ನಯ್ಯ, ನೀರಜ್ ಪಾಲ್, ಟಿ. ಕೆ. ಸುಧೀರ್, ದುರ್ಗಾಪ್ರಸಾದ್,ಶೋಭಾ ಕೇಶವ, ರಮಾನಂದ ಪೂಜಾರಿ, ಮಂಜುಳಾ ನಾಯಕ್, ಉದಯ ಕುಂದರ್, ಯಶ್ವಾಂಥ್ ಪ್ರಭು, ಸಮರ್ಥ ಭಟ್, ಯೋಗೇಶ್ ನಾಯಕ್, ಲಿಯಾಖತ್ ಶಾ, ಲಕ್ಷ್ಮಣ್ ಶೆಟ್ಟಿ, ತನ್ವಿರ್ ಲಿಯಾಖತ್, ಶಾನ್ ಡಿಸೋಜಾ, ಆಸ್ಟನ್, ಮೀನಾ ಟೆಲಿಸ್ ಮೊದಲಾದವರು ಉಪಸ್ಥಿತರಿದ್ದರು.