ಮನದಲ್ಲಿ ತೃಪ್ತಿ ಎಂಬ ಪುಟ್ಟ ಹಣತೆ ಹಚ್ಚಿಟ್ಟರೆ

ಬದುಕಿನಲಿ ಪ್ರತಿದಿನವೂ ದೀಪಾವಳಿ...

ಮನದ ಕತ್ತಲೆಯ ಬೇಲಿ ದಾಟಿ ಬಾ

ಓ ಮನಸೇ ಆಚರಿಸು ದೀಪಾವಳಿ...


ಸತ್ಯವೆಂಬ ದೀಪವ ಬೆಳಗಲಿ ನಿನ್ನಲ್ಲಿ

ಶಾಂತಿ ನೆಮ್ಮದಿಯು ನೆಲೆಸಲಿ ಮನದಲ್ಲಿ


ಬೆಳಗುತಿವೆ ಮನೆ ಮುಂದೆ ದೀಪದ ಸಾಲು

ಬೆಳಗಲಿ ಮನದಲ್ಲಿ ಜ್ಞಾನದ ಮಿಂಚಿನ ಸಾಲು


ಅಂಜಲಿ ಶಿದ್ಲಿಂಗ್