ಕಿನ್ನಿಗೋಳಿ: ರಕ್ತದಾನವೇ ಶ್ರೇಷ್ಠದಾನ ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು ಆರೋಗ್ಯವಾದ ವ್ಯಕ್ತಿ ಮೂರು ತಿಂಗಳಿಗೊಮ್ಮೆ ಆದರೂ ರಕ್ತದಾನ ಮಾಡಬೇಕು ಇಂದು ರೋಟರಿ ಕ್ಲಬ್ ಕಿನ್ನಿಗೊಳಿ ಅಧ್ಯಕ್ಷರು ತ್ಯಾಗರಾಜ ಆಚಾರ್ಯ ಹೇಳಿದರು.

ಅವರು ಪೊಂಪೈ ಕಾಲೇಜು, ಐಕಳ, ಶಿಕ್ಷಕ ರಕ್ಷಕರ ಸಂಘ, ಐ ಕ್ಸೂ ಎ ಸಿ , ಎನ್ ಎಸ್ ಎಸ್, ಎನ್ ಸಿ ಸಿ, ಆರ್ ಆರ್ ಸಿ, ಯೂತ್ ರೆಡ್ ಕ್ರಾಸ್, ಲಯನ್ಸ್ ಮತ್ತು ಲಿಯೋ ಕ್ಲಬ್  ಕಿನ್ನಿಗೋಳಿ, ರೋಟರಿ ಕ್ಲಬ್ ಕಿನ್ನಿಗೋಳಿ , ನವ ಚೇತನ್ ಯುವಕ ಮಂಡಳಿ ಏಳಿಂಜೆ, ಇವರ ಸಹೋದರದೊಂದಿಗೆ, ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ ಬೃಹತ್ ಭಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.  

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಿನ್ನಿಗೋಳಿ ಮಾಜಿ ಅಧ್ಯಕ್ಷರು ವೈ ಯೋಗೇಶ್ ರಾವ್ ಎಂಜಿಎಫ್, ಪೊಂಪೈ ಕಾಲೇಜು ಐಕಳ ಪ್ರಾಂಶುಪಾಲರು ಡಾ ಪುರುಷೋತ್ತಮ ಕೆ ವಿ, ಶಿಕ್ಷಕರಕ್ಷಕರ ಸಂಘದ ಅಧ್ಯಕ್ಷರು ಶ್ರೀ ವಿನ್ಸೆಂಟ್ ಡಿಸೋಜ, ಸಂಯೋಜನಕರು ಐ ಕ್ಸೊ ಎಂ ಸಿ ಡಾ ಗುಣಾಕಾರ ಎಸ್, ಎನ್ ಸಿ ಸಿ ಸಹಾ ಅಧಿಕಾರಿ  ನಿಶಿತ್ ಫೆರ್ನಾಂಡಿಸ್,  ವೈ ಆರ್ ಸಿ ಸಂಯೋಚಕರು ಫ್ಲೋರಿಂಗ್ ಡಿಸೋಜಾ  ಜ್ಯೋತಿ ಸಿ, ಕಾರ್ಯಕ್ರಮಾಧಿಕಾರಿಗಳು  ನೇಮಿಚಂದ್ರ ಗೌಡ ಎಂ,  ಆಶಾಲತಾ, ಜಿಲ್ಲೆ 317ಡಿ ಇದರ ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಎಂಜೆಎಫ್,ನವಚೇತನ ಯುವಕ ಮಂಡಲ ಏಳಿಂಜೆ ಭಾಸ್ಕರ್ ಶೆಟ್ಟಿ, ಲಯನ್ ಪೌಲ್ ಮಿರಾಂಡಾ, ರೊಟೇರಿಯನ್ ಲಕ್ಷ್ಮಣ್ ಬಿಬಿ, ರಾಘವೇಂದ್ರ ಎಂ ಎನ್ ಕೆಎಂಸಿ ಆಸ್ಪತ್ರೆ ಮಂಗಳೂರು, ಮತ್ತಿತರ ಉಪಸ್ಥಿತರಿದ್ದರು.