ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆ ಹಾಗೂ ಮಂಗಳೂರಿನ ಎ.ಜೆ.ಆಸ್ಪತ್ರೆ ರಿಸರ್ಚ್ ಸೆಂಟರ್ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಶಿಬಿರ ಪಕ್ಷಿಕೆರೆ ಚರ್ಚ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಚರ್ಚ್ ನ ಧರ್ಮ ಗುರುಗಳಾದ ಫಾ. ಮೆಲ್ವಿನ್ ನೋರೋಹ್ನ ಮಾತನಾಡಿ ರಕ್ತದಾನ ಹಾಗೂ ಉಚಿತ ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಜನತೆಯಲ್ಲಿ ಶಿಸ್ತು ಹಾಗೂ ಸ್ವಚ್ಛತೆ ಮೂಡಿಸುವ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಮ್ರಾಲ್ ಗ್ರಾ.ಪಂ.ಅಧ್ಯಕ್ಷ ಮಯ್ಯದ್ದಿ, ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಶಿವಕುಮಾರ್, ಮಂಗಳೂರು ಸೆಂಟ್ರಲ್ ರೋಟರಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಐಸಿವೈಎಂ ಪಕ್ಷಿಕೆರೆಯ ಅಧ್ಯಕ್ಷ ಡ್ಯಾರಿಲ್ ಮಿರಾಂಡಾ, ಸೈಂಟ್ ಜೂಡ್ ಎಸ್ಸೋಸಿಯೇಷನ್ ನ ಫ್ಲೇವಿ ಡಿಸೋಜಾ, ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವೈದ್ಯರಾದ ಡಾ. ಸುಬ್ರಮಣ್ಯ, ಡಾ. ಸಂದೀಪ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿಸೋಜ, ಐಸಿವೈಎಂ ವಲಯ ಅಧ್ಯಕ್ಷ ಲೆಸ್ಟರ್ ಲಸ್ರದೊ, ಚರ್ಚ್ ನ ಪಾಲನಾ ಸಮಿತಿ ಅಧ್ಯಕ್ಷೆ ಶೈಲಾ ಡಿಸೋಜಾ, ಕಾರ್ಯದರ್ಶಿ ಸುನಿಲ್ ಮೊರಾಸ್, ಉದ್ಯಮಿ ಧನಂಜಯ ಶೆಟ್ಟಿಗಾರ್ ಸಾಗರಿಕ,, ಅರಸೀಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ರಾಬರ್ಟ್ ಡಿಸೋಜಾ ನಿರೂಪಿಸಿದರು ಬಳಿಕ ರಕ್ತದಾನ ಹಾಗೂ ಆರೋಗ್ಯ ಶಿಬಿರ ನಡೆಯಿತು.