ಎಲ್ಲಾ ಪಾಲಕರಿಗೂ ತಮ್ಮ ಮಕ್ಕಳು ಓದಿನಲ್ಲಿ ಎಲ್ಲರಿಗಿಂತ ಮುಂದೆ ಇರಬೇಕು ಅನ್ನೋ ಆಸೆ ಇರುತ್ತದೆ.ಆದರೆ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವದರಿಂದ ಅವರ ಮನಸ್ಸಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು.ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಾ ಇದ್ದಹಾಗೆ ಒಂದು ತರಹದ ತಳಮಳ ಭಯ ಆತಂಕ ಇದಕ್ಕಿಂತ ಜಾಸ್ತಿ ಆತಂಕ ಆ ಪರೀಕ್ಷೆಯ ರಿಸಲ್ಟ್ ಬರುವ ಸಮಯ ಕೆಲವು ಮಕ್ಕಳು ಇದೆ ಆತಂಕ ಭಯದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾದಾರೆ ಇನ್ನು ಕೆಲ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಹಾಗಾದರೆ ಮಕ್ಕಳ ಆ ಭಯ ತಳಮಳ ಆತಂಕಕ್ಕೆ ಕಾರಣ ಯಾರು ಎಂಬ ನಮ್ಮ ಪ್ರಶ್ನೆಗೇ ಉತ್ತರ ಅವರ ಪಾಲಕರ ಅತಿಯಾದ ನಿರೀಕ್ಷೆ ಒತ್ತಡ ಹೌದು ಓದುಗರೇ ಈ ಘಟನೆಗಳಿಗೆ ಪರೋಕ್ಷವಾಗಿಯೋ ಅಥವಾ ಪ್ರತ್ಯಕ್ಷವಾಗಿಯೋ ಆ ಮಕ್ಕಳ ಪಾಲಕರೇ ಕಾರಣ.ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಹೇಗಿರಬೇಕು ಎಂಬುದಕ್ಕೆ ನನ್ನ ಕೆಲವು ಸಲಹೆಗಳು.
ಬೆಳಿಗ್ಗೆ ಎದ್ದಕೂಡಲೇ ಗಡಿಬಿಡಿಯಲ್ಲಿ ತಯ್ಯಾರಾಗುವ ಮಕ್ಕಳು ಬೆನ್ನು ಬಾಗುವಷ್ಟು ಭಾರದ ಬ್ಯಾಗ್ ಹೊತ್ತು ಶಾಲೆಗೆ ತೆರಳುತ್ತಾರೆ.ಅಲ್ಲಿ 7 8 ಘಂಟೆ ಪಾಠ ಕೇಳಿ ಕುರಿ ಹಿಂಡಿನಂತೆ ಸ್ಕೂಲ್ ವ್ಯಾನ್ ನಲ್ಲಿ ಬೆಂದು ಬೆಂಡಾದ ಮಕ್ಕಳು ಸಂಜೆ ಮನೆಗೆ ಬರುತ್ತಾರೆ.ಬಂದು ಸರಿಯಾಗಿ ಮನೆಯಲ್ಲಿ ಕೂತಿರಲ್ಲ ಮತ್ತೇ ಟ್ಯೂಷನ್ ಗೇ ಹೋಗಿ ಅಲ್ಲಿ 2 ಗಂಟೆ ಪಾಠ ಕೇಳಿ ರಾತ್ರಿ ಮನೆಗೆ ಬಂದು ಮರುದಿನದ ಹೋಂ ವರ್ಕ್ ಮಾಡಿ ಊಟ ಮಾಡಿ ಮಲಗಿದರೆ ಮುಗಿತು ಮತ್ತೇ ಮರುದಿನ ಉಸಿರುಗಟ್ಟಿಸುವ ದಿನಚರಿ ಪ್ರಾರಂಭ. ಇದು ಇಂದಿನ ಮಕ್ಕಳ ಜೀವನ ಶೈಲಿ.
ನಮ್ಮ ಸಮಾಜದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಶಿಕ್ಷಣ ನೀಡುವದು ತುಂಬಾ ಮುಖ್ಯ ಅದು ಪ್ರತಿ ಪಾಲಕರ ಜವಾಬ್ದಾರಿ ಕೂಡ ಹೌದು ಆದರೆ ಕೆಲ ಪಾಲಕರು ಹೆಚ್ಚಿನ ಅಂಕ ಗಳಿಸಲು ಮಕ್ಕಳ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದಾರೆ.ಇದು ಬದಲಾಗಬೇಕು ಇವರಿಗೆ ಗೊತ್ತಾಗಬೇಕು *ಅವರ ಮಗು ಸ್ಕೂಲ್ ನಲ್ಲಿ ಸಿಗೋ ಮಾರ್ಕ್ಸ್ ಗಿಂತ ಎಷ್ಟೋ ಬೆಲೆಬಾಳುವಂತಹದ್ದು ಬೆಲೆನೇ ಕಟ್ಟೋಕೆ ಆಗದೇರೋವಂತದ್ದು ಅಂತ* ಆದರೆ ಇದು ಯಾರಿಗೂ ಅರ್ಥ ಆಗ್ತಾ ಇಲ್ಲಾ. ಈ ಕೆಲ ಪೋಷಕರು ತಮ್ಮ ಮನೆಯ ಸುತ್ತಮುತ್ತಲಿನ ಜನರ ಮುಂದೆ ಸಂಭಂದಿಕರ ಮುಂದೆ ತಮ್ಮ ಜಂಬ ಕೊಚ್ಚಿಕೊಳ್ಳೋಕೆ ತಮ್ಮ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಿ ಅವರಲ್ಲಿ ಅಸಹಾಯಕ ಭಾವನೆ ತಂದು ಪರೋಕ್ಷವಾಗಿ ಖಿನ್ನತೆಗೆ ಆತ್ಮಹತ್ಯೆಗೇ ಡೊಡುವ ಕಾರ್ಯ ಮಾಡುತ್ತಿದ್ದರೆ.
ದಿನದ 24 ಘಂಟೆಲಿ 10 ಘಂಟೆ ಮಗು ನಿದ್ದೆ ಮಾಡುತ್ತೇ. 8 ಘಂಟೆ ಶಾಲೆಯಲ್ಲಿ ಇರುತ್ತೆ 2 ಘಂಟೆ ಟ್ಯೂಷನ್ ಹೋಗುತ್ತೆ ಉಳಿದ 4 ಘಂಟೆನಾ ಆ ಮಗುವನ್ನು ಮಗುವಾಗಿ ಇರೋದಕ್ಕೆ ಬಿಡಿ ಅದು ತನ್ನ ಬಾಲ್ಯ ಅನುಭವಿಸಲಿ ಬಾಲ್ಯ ಅನ್ನೋದು ಮತ್ತೇ ಸಿಗೋದಲ್ಲ. ಮನೇಲಿ ಅಣ್ಣ ತಂಗಿ ಜೊತೆ ಆಟ ಆಡ್ಲಿ ಸ್ನೇಹಿತರ ಜೊತೆ ಆಟ ಆಡಲಿ ಟಿ ವಿ ನೋಡಲಿ ಅದಕ್ಕೂ ಸ್ವಲ್ಪ ಖುಷಿ ಸಿಗಲಿ.
ಪರೀಕ್ಷೆ ಹತ್ತಿರ ಬರುತ್ತಾ ಇದ್ದ ಹಾಗೇ ಮಕ್ಕಳಿಗೆ ಧೈರ್ಯ ಹೇಳಿ. ನೋಡು ನೀನು ಚನ್ನಾಗಿ ಓದು ಪರೀಕ್ಷೆ ಬರೀ ರಿಸಲ್ಟ್ ಬಗ್ಗೆ ಯೋಚನೆ ಮಾಡಬೇಡ. ಪರೀಕ್ಷೆ ಬಗ್ಗೆ ಜಾಸ್ತಿ ಭಯ ಪಡಬೇಡ. ನೀನು ಬುದ್ದಿವಂತ ಬರೀತಿಯ ನಿನ್ನ ರಿಸಲ್ಟ್ ಹೇಗೆ ಬಂದ್ರು ನಮಗೆ ಖುಷಿ ಅಂತ ಧೈರ್ಯದ ಮಾತು ಹೇಳಿ.. ಅದನ್ನ ಬಿಟ್ಟು ನೀನು ಎಕ್ಸಾಮ್ ನಲ್ಲಿ 100 ಕೆ 100 ತಗೋಲಿಲ್ಲ ಅಂದ್ರೆ ನಿನ್ನ ಮನೆಯಿಂದ ಹೊರಗೆ ಹಾಕ್ತಿನಿ ನಿನ್ನ ಏನು ಮಾಡ್ತೀನಿ ನೋಡು ಅನ್ನುವ ಬೆಚ್ಚಿಬಿಳಿಸುವ ಮಾತುಗಳನ್ನು ಅವರ ಮುಂದೆ ಆಡಬೇಡಿ. ಇದು ತುಂಬಾ ಕೆಟ್ಟ ಪರಿಣಾಮ ಬಿರುತ್ತದೆ. ಮುಂದೆ ಅವರ ರಿಸಲ್ಟ್ ಬಂದಾಗ ಅದು ಹೇಗೆ ಇದ್ರೂ ಶಾಂತವಾಗಿ ತಗೋಳಿ ಬೇಜಾರ್ ಆಗ್ಬೇಡಿ ಸಿಟ್ಟು ಮಾಡ್ಕೋಬೇಡಿ ಮಕ್ಕಳನ್ನು ಹೊಡಿಯೋದು ಬೈಯೋದು ಮಾಡಬೇಡಿ. ಅವರಿಗೇ ಸೋಲನ್ನು ಮೆಟ್ಟಿನಿಂತು ಗೆಲ್ಲುವ ಮಾರ್ಗದರ್ಶನ ನೀಡಿ
ಮಕ್ಕಳು ಒಂದು ವೇಳೆ ಫೇಲ್ ಆಗಿದ್ರೆ ಅಥವಾ ಕಡಿಮೆ ಮಾರ್ಕ್ಸ್ ಬಂದಿದ್ರೆ ಕೋಪದಲ್ಲಿ ನೀವು ಮಕ್ಕಳಿಗೆ ಆಟ ಆಡೋದು ಟಿ ವಿ ನೋಡುದು ಬಂದು ಮಾಡಬೇಡಿ ಅವರ ಮನರಂಜನೆಗೇ ಅಡ್ಡಿಯಾಗಬೇಡಿ. ಆಟ ಆಡೋದರಿಂದ ಮಕ್ಕಳು ದೈಹಿಕವಾಗಿ ಸದೃಢರಾಗುತ್ತಾರೆ. ಟಿ ವಿ ನೋಡೋದರಿಂದ ಮನರಂಜನೆಯಿಂದ ಅವರು ಶಾಂತರಾಗಿ ಖಿನ್ನತೆಯಿಂದ ಹೊರಬರುತ್ತಾರೆ.ಮಕ್ಕಳಿಗಾಗಿ ನೀವೇ ಖುದ್ದಾಗಿ ಒಂದು ಟೈಮ್ ಟೇಬಲ್ ಮಾಡಿ ಕೊಡಿ ಅದರಲ್ಲಿ ಆಟ ಪಾಠ ಎಲ್ಲಾ ಇರಬೇಕು.
ಎಲ್ಲಾ ಪೋಷಕರು ನಿಮ್ಮ ಮಕ್ಕಳನ್ನು ಸ್ನೇಹಿತರಂತೆ ಕಾಣಿ ಏಕೆಂದರೆ ಅವರು ನಿಮ್ಮನ್ನು ನೋಡಿದರೆ ಭಯ ಪಡೋದು ಆತಂಕಕ್ಕೆ ಒಳಪಡೋದು ಆಗಬಾರದು. ನೀವು ಅವರನ್ನು ಸ್ನೇಹಿತರಂತೆ ಕಂಡರೆ ಅವರು ನಿಮ್ಮ ಜೊತೆ ಪ್ರತಿಯೊಂದು ವಿಷಯವನ್ನು ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಶಾಲೆಯಲ್ಲಿ ಏನಾದ್ರು ತೊಂದ್ರೆ ಆದ್ರೆ ಯಾರಾದ್ರೂ ಕಿರುಕುಳ ಕೊಟ್ರೆ ಅವರನ್ನು ನಿಮಗೆ ಬಂದು ಹೇಳುತ್ತಾರೆ. ಹಾಗೂ ಅದರ ಜೊತೆ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಹೇಳಿ ಪುಸ್ತಕ ಜ್ಞಾನಕ್ಕಿಂತ ಸಾಮಾಜಿಕ ಜ್ಞಾನ ಬಹಳ ಮುಖ್ಯ ಅಂತ ಹೇಳಿ ಹೆಚ್ಚು ಅಂಕ ಪಡೆಯದಿದ್ದರೂ ಪರವಾಗಿಲ್ಲ ಆದರೆ ವಿಷಯವನ್ನು ಸರಿಯಾಗಿ ತಿಳಿಯುವದರ ಗಮನ ಕೊಡಿ ಅಂತ ಹೇಳಿ.
ಎಲ್ಲಾ ಪಾಲಕರು ಕನಿಷ್ಟ ತಿಂಗಳಿಗೆ ಒಮ್ಮೆ ಆದರೂ ನಿಮ್ಮ ಮಕ್ಕಳ ಸ್ಕೂಲ್ ಕಾಲೇಜ ಗೇ ಹೋಗಿ ಅವರ ವಿದ್ಯಾಭ್ಯಾಸದ ಕುರಿತಾದ ಮಾಹಿತಿ ಅವರ ಶಿಕ್ಷಕರಿಂದ ಪಡೆಯಬೇಕು.ಅವರು ಪ್ರತಿದಿನ ಸ್ಕೂಲ್ ಕಾಲೇಜು ಬರ್ತಾರಾ ಎಲ್ಲಾ ಅವಧಿ ಕೂತ್ಕೋತರ ಅಂತ ನೋಡಬೇಕು. ಹಾಗೂ ನಿಮ್ಮ ಮಕ್ಕಳ ಸ್ನೇಹಿತರ ಬಗ್ಗೆ ತಿಳಿಯಬೇಕು. ಅವರ ಸುತ್ತಮುತ್ತಲಿನ ಸ್ನೇಹಿತರು ಹೇಗಿದ್ದಾರೆ ತಿಳಿಯಬೇಕು. ಇದು ತುಂಬಾ ಮುಖ್ಯ. ಕೇವಲ ಅವರು ಕೇಳುವ ಸ್ಕೂಲ್ ಕಾಲೇಜು ಗೇ ದಾಖಲಾತಿ ಮಾಡಿಸಿದರೆ ನಿಮ್ಮ ಜವಾಬ್ದಾರಿ ಮುಗಿಯಲ್ಲ. ಈ ರೀತಿ ನೀವು ಮಾಡುವದರಿಂದ ಮಕ್ಕಳು ದಾರಿ ತಪ್ಪುವ ಸಂಭವ ಕಮ್ಮಿ.
ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮ್ಮ ಮನೆಯ ವಾತಾವರಣ ಕೂಡ ಬಹಳ ದೊಡ್ಡ ಪಾತ್ರ ವಹಿಸುವುದು. ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು. ಜಗಳ ರಂಪಾಟ ಇತರದ ಚಟುವಟಿಕೆಗಳು ಆಗದಂತೆ ನೋಡಿಕೊಳ್ಳಬೇಕು.
ಮಕ್ಕಳ ಸಾಮರ್ಥ್ಯ ಅವರ ಮಾರ್ಕ್ ನಿಂದ ಅಳೆಯಬೇಡಿ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಸ್ಕೂಲ್ ಕಾಲೇಜು ನಲ್ಲಿ ಫಸ್ಟ್ ಬರ್ಬೇಕು ಅನ್ನೋದು ಏನಿಲ್ಲ. ನಮ್ಮ ದೇಶದಲ್ಲಿ ಎಷ್ಟೋ ಜನ ಸ್ಕೂಲ್ ನಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಆದೋರು ಫೇಲ್ ಆದೋರು ಇವತ್ತು ಪ್ರತಿಯೊಂದು ರಂಗದಲ್ಲೂ ಯಶಸ್ಸು ಪಡೆದಿದ್ದಾರೆ. ರಾಜಕಾರಣದಲ್ಲಿ ವ್ಯಾಪಾರದಲ್ಲಿ ನಟನೆಯಲ್ಲಿ ಆಟದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ.
ಪಾಲಕರೇ ಕಾಲೇಜ ಹಂತದಲ್ಲಿ ನಿಮ್ಮ ಮಕ್ಕಳಿಗೆ ಅವರ ಇಷ್ಟದ ಕೋರ್ಸ್ ಗೇ ಸೇರಲು ಅವಕಾಶ ಮಾಡಿಕೊಡಿ. ಏಕೆಂದರೆ ಅಲ್ಲಿ ಓದೋರು ನಿಮ್ಮ ಮಕ್ಕಳು ನೀವಲ್ಲ. ನಿಮ್ಮ ಮಕ್ಕಳಿಗೆ ಗೊತ್ತು ಅವರ ಸಾಮರ್ಥ್ಯ ಏನು ಅಂತ ನಿಮಗಲ್ಲ. ಪ್ರತಿಯೊಂದು ಕೋರ್ಸ್ ಗು ಅದರದೇ ಆದ ಮಹತ್ವ ಇದೆ. ಯಾವದು ದೊಡ್ಡದು ಅಲ್ಲಾ ಸಣ್ಣದು ಅಲ್ಲಾ. ತುಂಬಾ ಜನ ಪಾಲಕರು ಇಲ್ಲಿ ತಮ್ಮ ಮಕ್ಕಳ ಭವಿಷ್ಯದ ಜೊತೆ ಆಟ ಆಡುತ್ತಾರೆ. ಈ ತಪ್ಪು ಯಾವತ್ತೂ ಮಾಡಬೇಡಿ. ನಮ್ಮ ಕಾಲೇಜನಲ್ಲಿ ಒಬ್ಬ ಪಾಲಕರು ತಮ್ಮ ಮಗಳನ್ನು ನಮ್ಮ ಕಾಲೇಜು ದಾಖಲಾತಿಗೇ ಕರೆದುಕೊಂಡು ಬಂದರು ಆ ವಿದ್ಯಾರ್ಥಿನೀ ಎಸ್ ಎಸ್ ಎಲ್ ಸಿ ಯಲ್ಲಿ 92% ಅಂಕ ಪಡೆದಿದ್ದಾಳೆ. ಅವಳಿಗೇ ಕಲಾ ವಿಭಾಗದಲ್ಲಿ ಆಸಕ್ತಿ ಆದರೆ ಅವರ ತಂದೆಗೆ ವಿಜ್ಞಾನ ವಿಭಾಗದಲ್ಲಿ ಮಗಳು ಎಷ್ಟು ಬೇಡ ಎಂದರು ತಂದೆ ವಿಜ್ಞಾನ ವಿಭಾಗದಲ್ಲಿ ದಾಖಲಾತಿ ಮಾಡಿಸಿದರು. ಅವಳು ಆಸಕ್ತಿಯಿಂದ ಓದಲಿಲ್ಲ ಪರಿಣಾಮ ಪ್ರಥಮ ಪಿ ಯು ಸಿ ಯಲ್ಲಿ 2 ವಿಷಯಗಳಲ್ಲಿ ಆ ವಿದ್ಯಾರ್ಥಿನೀ ಫೇಲ್. ನೋಡಿ ಅವರ ಪಾಲಕರು ಒತ್ತಾಯಕ್ಕೆ ಅವಳ ಭವಿಷ್ಯ ಹೇಗಾಯ್ತು. ಇದು ಯಾರ ಜೊತೆನೂ ಆಗಬಾರದು.
ಪಾಲಕರೇ ಪ್ರತಿಯೊಬ್ಬ ವಿದ್ಯಾರ್ಥಿಯು ವಿಶೇಷ ಪ್ರತಿಯೊಬ್ಬ ಮಕ್ಕಳಲ್ಲಿ ವಿಶೇಷ ಸಾಮರ್ಥ್ಯಗಳು ಇರುತ್ತವೆ. ಅದನ್ನ ಸರಿಯಾಗಿ ಗುರುತಿಸಿ ಅವರಿಗೇ ಸರಿಯಾದ ಸಹಕಾರ ಮಾರ್ಗದರ್ಶನ ನೀಡುವದು ಪಾಲಕರ ಕರ್ತವ್ಯ... ಜೀವನ ಅನ್ನೋ ಆಟದಲ್ಲಿ ಒಂದು ಅವಕಾಶ ಹೋದರೆ ಮತ್ತೊಂದು ಅವಕಾಶ ಬರುತ್ತದೆ ಆದರೆ ಒಮ್ಮೆ ಹೋದ ಜೀವ ಮತ್ತೇ ಮರಳಿ ಬರುವದಿಲ್ಲ. ಮಕ್ಕಳಿಗೆ ಸೋತು ಗೆಲ್ಲುವದು ಹೇಳಿ ಕೊಡಿ.
ಮಕ್ಕಳೇ ನೀವು ಸಹ ಫಲಿತಾಂಶ ಹೇಗೆ ಬರಲಿ ಅದನ್ನ ಶಾಂತವಾಗಿ ಸ್ವೀಕರಿಸಿ ಎಲ್ಲಿ ತಪ್ಪಾಗಿದೆ ತಿಳಿದು ಅದನ್ನ ಸರಿಪಡಿಸಿ ಮತ್ತೇ ಅವಕಾಶ ಪಡೆದು ಪರೀಕ್ಷೆ ಬರೆದು ನಿಮ್ಮ ಗುರಿಯನ್ನ ಪಡೆಯಿರಿ. ಸೋತು ಅವಮಾನ ಸಿಕ್ಕ ಜಾಗದಲ್ಲಿ ಗೆದ್ದು ಸನ್ಮಾನ ಪಡೆಯುವ ಚಾಲೆಂಜ್ ಮಾಡಬೇಕು.
ನವೀನ ಗೋಪಾಲಸಾ ಹಬೀಬ