ಭಾರತ ಪುಣ್ಯ ಭೂಮಿ ಮೋಕ್ಷ ಭೂಮಿ ಸಂಪ್ರದಾಯ ಸಂಸ್ಕಾರಗಳ ಅಗರ ಇದು. ಮನುಷ್ಯನ ಜೀವನದಲ್ಲಿ ಐದು ಋಣಗಳು ಮುಖ್ಯ ಪಾತ್ರವಹಿಸುತ್ತದೆ. ಪಿತೃ ಋಣ (ತಂದೆ ಋಣ) ಮಾತೃಋಣ (ತಾಯಿಯ ಋತಯಣ) ದೇವ ಋಣ (ದೇವತೆಗಳ ಋಣ) ಋಷಿ ಋಣ (ಗುರುಗಳ ಋಣ) ಮನುಷ್ಯ ಋಣ(ಸಮಾಜದ ಋಣ) ಭೂತ ಋಣ(ಧಾತುಗಳ ಋಣ).ಎಲ್ಲಾ ಋಣಗಳನ್ನ ಅದಷ್ಟು ತೀರಿಸಿ ಹೋಗಬೇಕು ಅನ್ನೋದು ಶಾಸ್ತ್ರ.ಪುನರಪಿ ಜನನಂ ಪುನರಪಿ ಮರಣಂ ಅಂತಾರೆ ನಾವು ಭೂಮಿಗೆ ಬರೋದು ಋಣಗಳನ್ನ ತೀರಲಿಸಿಲ್ಲಿಕ್ಕೆ ಋಣಗಳು ಮುಗಿದ ಮೇಲೆ ಮೋಕ್ಷ ಪ್ರಾಪ್ತಿ ಆಗುತ್ತದೆ ಅನ್ನೋದು ನಂಬಿಕೆ.
ಪಿತೃಋಣವನ್ನು ತೀರಸಲು ಪಿತೃಪಕ್ಷವನ್ನು ಹದಿನೈದು ದಿನಗಳ ಕಾಲ ಆಚರಿಸುತ್ತೇವೆ. ಕರ್ಣ ಪಿತೃ ಲೋಕಕ್ಕೆ ಹೋದಾಗ ಅವನಿಗೆ ಆಹಾರವೇ ಸಿಗಲಿಲ್ಲ ಅಂತೇ ಅವನು ಯಾಕೆ ಎಂದು ಕೇಳಿದಾಗ ದೇವರು ನೀನು ಜೀವನದಲ್ಲಿ ಚಿನ್ನವನ್ನೇ ದಾನ ಮಾಡಿದ್ದೇ ಹೊರತು ಪಿತೃಗಳಿಗೆ ಅನ್ನ ನೀಡಲಿಲ್ಲ ಅಂದರಂತೇ ಅದಕ್ಕೆ ಕರ್ಣ ಪಿತೃಪಕ್ಷ ದಲ್ಲಿ ಭೂಮಿಗೆ ಬಂದು ಪಿತೃಗಳಗೆ ಆಹಾರ ನೀಡಿ ಹೋಗತ್ತಾನೆ ಎನ್ನುವುದು ಪುರಾಣದ ಕಥೆ ಹೇಳುತ್ತದೇ. ನಾವು ಪಿತೃಗಳಿಗೆ ತರ್ಪಣ ನೀಡಿದರೆ ನಮಗೆ ಪಿತೃಲೋಕದಲ್ಲಿ ಆಹಾರ ಸಿಗುತ್ತದೆ ಹಾಗೆ ಪಿತೃಗಳ ಆರ್ಶೀವಾದದಿಂದ ನಮ್ಮ ಜೀವನ ಚೆನ್ನಾಗಿ ಇರುತ್ತದೆ. ಸೀತೆ ರಾಮನ ಅಪ್ಪ ದಶರಥನಿಗೆ ಗಯಾದಲ್ಲಿ ದರ್ಪಣ ನೀಡಿದ್ದಾರೆಂದು ಕಥೆ ಹೇಳುತ್ತದೆ.
ತಾಯಿಯ ಗರ್ಭದಿಂದ ಭೂಮಿಗೆ ನಾವು ಬರೋದರಿಂದ ನದಿಗಳಲ್ಲಿ ದರ್ಪಣ ಪಿಂಡ ಪ್ರಧಾನ ಮಾಡಲು ಉತ್ತಮ ಸ್ಥಳ ಎನ್ನುತ್ತಾರೆ ಏಕೆಂದರೆ ನದಿಗಳನ್ನ ಹೆಣ್ಣು ಮಕ್ಕಳಿಗೆ ಹೋಲಿಸುತ್ತಾರೆ. ತಂದೆಗೆ ಅಜ್ಜನಿಗೆ ಮುತ್ತಜ್ಜನಿಗೆ ಪಿಂಡಪ್ರಧಾನ ಮಾಡಬಹುದು ಪಿಂಡ ಪ್ರಧಾನವನ್ನ ಧರ್ಬೆ ಚಾಪೆಯಲ್ಲಿ ದರ್ಭೆ ಉಂಗುರ ತೊಟ್ಟು ಬಿಡಬೇಕು ಎನ್ನುವುದು ಶಾಸ್ತ್ರ.ತರ್ಪಣಾದಿಗಳನ್ನು ಮಾಡುವವರು ಶುದ್ಧವಾದ ಸ್ಥಳ, ವಸ, ನೀರು, ಎಳ್ಳು ಹಾಗೂ ಅಕ್ಕಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ತರ್ಪಣದಲ್ಲಿ ಬಳಸುವ ಅಕ್ಕಿ ತುಂಡಾಗಿರಬಾರದು. ತರ್ಪಣ ಮಾಡುವ ಸ್ಥಳದಲ್ಲಿ ಉದುರಿದ ಕೂದಲು ಇತ್ಯಾದಿಗಳು ಇರಬಾರದು. ಪರಿಶುದ್ಧ ಮನಸ್ಸಿನಿಂದ ತರ್ಪಣಗಳನ್ನು ನೀಡಬೇಕು. ಮನೆಯಲ್ಲಿ ಹಿರಿಯರ ದಿನದ ಆಚರಣೆಯ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ, ಕೂಗುವುದು, ಕಿರುಚುವುದು ಮಾಡಬಾರದು. ಈ ಸಂದರ್ಭದಲ್ಲಿ ಘಂಟಾನಾದಕ್ಕೆ ನಿಷೇಧವಿದೆ. ಈ ಪಕ್ಷದಲ್ಲಿ ಪಿತೃಗಳ ತೃಪ್ತಿಗಾಗಿ ದಾನಗಳಿಗೆ ಮಹತ್ವವಿದೆ ಈರುಳ್ಳಿ-ಬೆಳ್ಳುಳ್ಳಿ ಇತ್ಯಾದಿ ತಮೋಗುಣಪ್ರಧಾನ ತರಕಾರಿ ಹೊರತುಪಡಿಸಿ ಬೇರೆ ತರಕಾರಿ, ಅಕ್ಕಿ, ಬೇಳೆ, ಬೆಲ್ಲ ಇತ್ಯಾದಿಗಳನ್ನು ಕುಂಬಳಕಾಯಿ ಸಹಿತ ದಾನ ಮಾಡಬೇಕು. ವಸ, ಗೋವು, ಹೊಸ ಕೊಡೆ, ಹೊಸ ಪಾದರಕ್ಷೆ ಇತ್ಯಾದಿಗಳ ದಾನವು ಕೂಡ ವಿಶೇಷ ಫಲಗಳನ್ನು ಹಾಗೂ ಪಿತೃಗಳಿಗೆ ತೃಪ್ತಿಯನ್ನು ಕೊಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಪಿತೃಗಳ ಋಣದಿಂದ ನಾವು ಬದುಕುತ್ತೇವೇ ಪಿತೃಗಳಿಗೆ ಋಣ ತೀರಿಸಲು ಸುವರ್ಣ ಅವಕಾಶ ಬಂದಿದೇ ಈ ತಿಂಗಳಲ್ಲಿ ಎಲ್ಲಾರೂ ಪಿತೃಗಳಿಗೆ ಇಷ್ಟವಾದ ಆಹಾರಗಳನ್ನ ಇಟ್ಟು ಪಿತೃ ಋಣಗಳನ್ನ ತೀರಿಸಿಕೊಳ್ಳುವ ಪಿತೃಗಳಿಗೆ ಶ್ರಾದ್ಧ, ತರ್ಪಣಾದಿಗಳನ್ನು ನೀಡದಿದ್ದರೆ, ಹೇಗೆ ಮುಂದಿನ ಪದವಿಯನ್ನು ಗಳಿಸಲಾರರು ಎಂಬ ಅರ್ಜುನನ ವಿಷಾದ ಭಗವದ್ಗೀ ತೆಯಲ್ಲಿ ಉಲ್ಲೇಖಗೊಂಡಿದೆ.
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕ ಕ್ರಿಯಾಃ
ವರ್ಣ ಸಾಂಕರ್ಯವು ಕುಲಘಾತಕರನ್ನು ಮತ್ತು ಕುಲವನ್ನೂ ನರಕಕ್ಕೆ ಕೊಂಡೊಯ್ಯುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್ ಶ್ರಾದ್ಧ ಮತ್ತು ಪಿತೃ ತರ್ಪಣಗಳಿಂದ ವಂಚಿತರಾದ ಇವರ ಪಿತೃಗಳು ಕೂಡ ಅಧೋಗತಿಯನ್ನು ಪಡೆಯುತ್ತಾರೆ ಎಂದಿದ್ದಾನೆ.
ರೇಷ್ಮಾ