ಮಂಗಳೂರು: ಐಎಂಎ ಯ ಮಾಜಿ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಐಎಂಎ ಯ ನಿಯೋಜಿತ ರಾಜ್ಯ ಉಪಾಧ್ಯಕ್ಷರೂ ಆಗಿರುವ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರ ಸಮಾಜಮುಖಿ ವೈದ್ಯಕೀಯ ಸೇವೆ.
ಸಮುದಾಯ ಸೇವೆ ಹಾಗೂ ಸಾಮಾಜಿಕ ಸಂಘಟನೆಗಾಗಿ ಈ ಬಾರಿ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಡಾ ಬಿ ಸಿ ರಾಯ್ ಸ್ಮಾರಕ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರವನ್ನ ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ , ಇಂಡಿಯಾದ ಸಬಾಂಗಣದಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಸೈನ್ಸ್ ಅಂಡ್ ಟೆಕ್ನಾಲಜಿ ಸಚಿವರೂ, ಸ್ವತಃ ಹಿರಿಯ ಐಎಂಎ ನಾಯಕರೂ, ವೈದ್ಯರೂ, ವೈದ್ಯಕೀಯ ಶಿಕ್ಷಕರೂ ಆಗಿರುವ ಡಾ ಜಿತೇಂದ್ರ ಸಿಂಗ್, ದೆಹಲಿಯ ಶಾಸಕರೂ , ಖುದ್ದು ದೆಹಲಿಯ ತಜ್ಞ ಖ್ಯಾತ ಹಿರಿಯ ಯೂರಾಲಜಿಸ್ಟ್, ಹಿರಿಯ ಐಎಂಎ ನಾಯಕರೂ ಆಗಿರುವ ಡಾ ಅನಿಲ್ ಗೋಯಲ್, ಜೊತೆ ಐಎಂಎ ರಾಷ್ಟ್ರೀಯ ಅಧ್ಯಕ್ಷರಾದ ಡಾ ದಿಲೀಪ್ ಭಾನುಶಾಲಿ, ನಿಕಟ ಪೂರ್ವ ಅಧ್ಯಕ್ಷರಾದ ಡಾ ಆರ್ ವಿ ಅಶೋಕನ್, ರಾಷ್ಟ್ರೀಯ ನಿಯೋಜಿತ ಅಧ್ಯಕ್ಷ ಡಾ ಅನಿಲ್ ಕುಮಾರ್ ಜೆ ನಾಯಕ್, ಕಾರ್ಯದರ್ಶಿ ಡಾ ಸರ್ಬರಿ ದತ್ತ, ಹಣಕಾಸು ಕಾರ್ಯದರ್ಶಿ ಡಾ ಪಿಯೂಷ್ ಜೈನ್ ಮುಂತಾದವರು ಪ್ರಶಸ್ತಿ ನೀಡಿ ಶುಭ ಹಾರೈಸಿದರು.