ಮಂಗಳೂರು: ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಂಗಳೂರು ಧರ್ಮಪ್ರಾಂತ್ಯವು ಸೆಪ್ಟೆಂಬರ್ ತಿಂಗಳನ್ನು ಮಾದಕದ್ರವ್ಯ ವ್ಯಸನ ಜಾಗೃತಿ ಮಾಸವಾಗಿ ಆಚರಿಸುತ್ತಿದೆ. ಈ ಪ್ರಯುಕ್ತ ಸೆಪ್ಟೆಂಬರ್ 17, 2023ರಂದು ಬೆಳಿಗ್ಗೆ ಯಂಗ್ ಕ್ಯಾಥೊಲಿಕ್ ಸ್ಟೂಡೆಂಟ್ಸ್ ಸಂಚಲನ ಆಂಜೆಲೊರ್ ಯೂತ್ ಮೂವ್‍ಮೆಂಟ್ ಜಂಟಿಯಾಗಿ ಗಾರ್ಡಿಯನ್ ಏಂಜಲ್ ಚರ್ಚ್, ನಾಗೋರಿ, ಮಂಗಳೂರು, ಇಲ್ಲಿ ಹೆತ್ತವರು ಮತ್ತು ಯುವಜನರಿಗೋಸ್ಕರ ಮಾದಕದ್ರವ್ಯ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು, ಇದರ ರಂಗ ಅಧ್ಯಯನ ಕೇಂದ್ರ ಹಾಗೂ ನಾಟಕ ಸಂಘದ ವತಿಯಿಂದ ಮಾದಕದ್ರವ್ಯ ವ್ಯಸನದ ಕೆಡುಕುಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕವನ್ನು ಪ್ರಸ್ತುತಪಡಿಸಲಾಯಿತು. ಧರ್ಮಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ವಂ. ವಿಲಿಯಂ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ. ಜೆರಾಲ್ಡ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿ’ಸೋಜಾ ಹಾಗೂ 21 ಆಯೋಗಗಳ ಸಂಯೋಜಕಿ ರೆನಿಟಾ ಮಿನೇಜಸ್ ಕಾರ್ಯಕ್ರಮಕ್ಕೆ ಹಾಜರಿದ್ದರು.