ಮುಂಬಯಿ: ಗಲ್ಫ್ ರಾಷ್ಟ್ರದ ದುಬಾಯಿ ಅಲ್ ಖುಸೈಸ್ ಇಲ್ಲಿನ ಫಾರ್ಚೂನ್ ದುಬೈ ಗ್ರ್ಯಾಂಡ್ ಹೋಟೆಲ್‍ನಲ್ಲಿ ಆತಿಥ್ಯ ಸತ್ಕಾರದ ವಿನೂತನ ಪರಿಕಲ್ಪನೆಯ ಭವ್ಯವಾದ `ಬೋಟ್ ಮ್ಯಾನ್ಸ್ ಹಬ್' ಕಳೆದ ಮಂಗಳವಾರ ಸಂಜೆ ಆಶೀರ್ವಚನ ಗೊಳಿಸಲ್ಪಟ್ಟಿತು.
ಗಲ್ಫ್ ರಾಷ್ಟ್ರದದ್ಯಾಂತ ಮನೆ ಮಾತಾಗಿರುವ ಕರ್ನಾಟಕ ಕರಾವಳಿಯ ಉಡುಪಿ ಮೂಲತಃ ವಕ್ವಾಡಿ ಪ್ರವೀಣ್ ಶೆಟ್ಟಿ ಪ್ರವರ್ತಕತ್ವದ ಫಾರ್ಚೂನ್ ಹೊಟೇಲು ಸಮೂಹದ ದುಬೈನ ಅಲ್ ಖುಸೈಸ್‍ನಲ್ಲಿ ತೆರೆಯಲು ಸಜ್ಜಾಗಿರುವ ಬಹುನಿರೀಕ್ಷಿತ ಕೋಸ್ಟಲ್ ಕ್ಯುಸಿನ್ ರೆಸ್ಟೋರೆಂಟ್ `ಬೋಟ್‍ಮ್ಯಾನ್ಸ್ ಹಬ್'ನ್ನು ದುಬೈನ ಸೈಂಟ್ ಮೇರಿ ಕ್ಯಾಥೋಲಿಕ್ ಚರ್ಚ್‍ನ ಧರ್ಮಗುರು ರೆ| ಫಾ| ಮೈಕೆಲ್ ಕಾರ್ಡೋಜ್ ಆಶೀರ್ವಚಿಸಿದರು.
ಈ ಉಪಹಾರಗೃಹವು ಎಲ್ಲರ ಸಮೃದ್ಧಿಯ ಸಂಕೇತವಾಗಿ ಬೆಳೆದು ಸ್ನೇಹ ಸೌಹಾರ್ದತೆಯ ರಕ್ಷಣೆಯ ಕೇಂದ್ರವೂ ಇದಾಗಲಿ ಮತ್ತು ಸಾಮರಸ್ಯದ ಧ್ಯೋತಕವಾಗಿ ಸದ್ಭಾವನೆ ಮತ್ತು ಸಂಪ್ರದಾಯಗಳನ್ನು ಸಾಂಘಿಕವಾಗಿ ಬೆಳೆಸುವ ತಾಣವಾಗುತ್ತಾ ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಏಕತೆಯನ್ನು ಹಾರೈಸಿ ಫಾ| ಮೈಕೆಲ್ ಶುಭ ಶಂಸನೆಗೈದರು.
ಆಶೀರ್ವದನಾ ನಂತರ ವಕ್ವಾಡಿ ಪ್ರವೀಣ್ ಶೆಟ್ಟಿ ಅವರೊಂದಿಗೆ ರೆಸ್ಟೋರೆಂಟ್‍ನಲ್ಲಿ ಫಾ| ಮೈಕೆಲ್ ಮೊದಲ ಊಟವನ್ನು ಅಸ್ವಾದಿಸಿ ಶಾಂತವಾದ ಚಿಂತನೆ ಮತ್ತು ಆಚರಣೆಯ ಕ್ಷಣಗಳೊಂದಿಗೆ ಕುಶಲೋಪರಿ ಹಂಚಿಕೊಂಡರು. ಏಕತೆ ಮತ್ತು ಹಂಚಿಕೆಯ ದೃಷ್ಟಿಕೋನವನ್ನು ಸಂಕೇತಿಸುವ ಈ ಉದ್ಘಾಟನಾ ಆತಿಥ್ಯ ಸೇವನಾ ಸಮಯದಿ `ಬೋಟ್‍ಮ್ಯಾನ್ಸ್ ಹಬ್' ನಿರ್ವಹಕಿ ಗೋವಾ ಮೂಲತಃ ಪ್ರಶಸ್ತಿ ವಿಜೇತ ಪ್ರಸಿದ್ಧ ಬಾಣಸಿಗ, ಚೆಪ್ ಸರಿತಾ ಚವ್ಹಾಣ್ ಮತ್ತು ಸಿಬ್ಬಂದಿಗಳೂ ಜೊತೆಗೂಡಿದ್ದು ನಿರ್ವಹಣಾ ತಂಡ ಮತ್ತು ಸಿಬ್ಬಂದಿ ಸದಸ್ಯರಿಗೆ ಫಾ| ಮೈಕೆಲ್ ಶುಭಾಶಯಗಳನ್ನು ತಿಳಿಸಿ ಅನುಗ್ರಹಿಸಿದರು.
ಭಿನ್ನವಾಗಿಸಿ ವೈಶಿಷ್ಟ್ಯಮಯ ಸಮುದ್ರಾಹಾರ ರೆಸ್ಟೋರೆಂಟ್ ಆಗಿರುವ `ಬೋಟ್‍ಮ್ಯಾನ್ಸ್ ಹಬ್' ಕರಾವಳಿ ಊಟದ ಅನುಭವವನ್ನು ನೀಡಲಿದ್ದು ಬುಧವಾರ ಸಂಜೆ ಕರ್ನಾಟಕದ ಪ್ರತಿಷ್ಠಿತ ಉದ್ಯಮಿ, ಕೊಡುಗೈದಾನಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ರೊನಾಲ್ಡ್ ಕೊಲಾಸೋ `ಬೋಟ್‍ಮ್ಯಾನ್ಸ್ ಹಬ್' ಉದ್ಘಾಟಿಸಲಿದ್ದಾರೆ. ಭಾರತೀಯ ಗಾಯಕಿ, ಗೋವಾದ ನಟಿ ರೀಟಾ ರೋಸ್ ಮತ್ತು ಅಬುಧಾಬಿ ಕರ್ನಾಟಕ ಸಂಘ ಇದರ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗಣ್ಯ ಅತಿಥಿಗಳು ಮತ್ತು ಗಣ್ಯರ ಉಪಸ್ಥಿತಿಯು ಫಾರ್ಚೂನ್ ಗ್ರೂಪ್‍ನ ಪಾಕಶಾಲೆಯ ಶ್ರೇಷ್ಠತೆಯ ಪ್ರಯಾಣದಲ್ಲಿ ಮಹತ್ವದ ಕ್ಷಣವನ್ನು ಗುರುತಿಸಲಿದೆ ಎಂದು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್‍ಗಳ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದರು.