ವಿದ್ಯಾಗಿರಿ, ಮೂಡುಬಿದಿರೆ: ಮೂಲವ್ಯಾಧಿ ರೋಗದ ಬಗ್ಗೆ ಅರಿವು ಅತ್ಯಗತ್ಯ. ಈ ಬಗ್ಗೆ ಎಚ್ಚರ ವಹಿಸಿದರೆ, ಆರಂಭಿಕ ಹಂತದಲ್ಲೇ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಆಳ್ವಾಸ್ ಆರ್ಯವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಹೇಳಿದರು. 

ವಿಶ್ವ ಮೂಲವ್ಯಾಧಿಯ ದಿನದ ಅಂಗವಾಗಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶಲ್ಯತಂತ್ರ ವಿಭಾಗ ಹಾಗೂ ಹಿಮಾಲಯ ವೆಲ್‍ನೆಸ್ ಕಂಪನಿ  ಸಹಯೋಗದಲ್ಲಿ ನಡೆದ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. 

ಮೂಲವ್ಯಾಧಿ ರೋಗದ ಉಗಮಕ್ಕೆ ಕಾರಣಗಳನ್ನು ತಿಳಿಸಿದ ಅವರು, ಲಕ್ಷಣಗಳನ್ನು ವಿವರಿಸಿದರು. ಹಿಮಾಲಯ ವೆಲ್‍ನೆಸ್ ಕಂಪೆನಿಯ ವ್ಯವಸ್ಥಾಪಕ ಅಲೋಕ್ ಕುಮಾರ್ ಹಾಗೂ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ ಭಟ್ ಉದ್ಘಾಟಿಸಿದರು. ಡಾ ಶಂಕರ್ ಪ್ರಸಾದ್ ವಂದಿಸಿದರು.