ಗಾಂಧಿನಗರದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಗುಜರಾತಿನ ಹೊಸ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಹಿತ 25 ಜನರ ಮಂತ್ರಿ ಮಂಡಲಕ್ಕೆ ಪ್ರಮಾಣವಚನ ಬೋಧಿಸಿದರು.

ಬೆಳಿಗ್ಗೆ ಸ್ಪೀಕರ್ ರಾಜೇಂದ್ರ ತ್ರಿವೇದಿ ರಾಜೀನಾಮೆ ನೀಡಿದ್ದರು. ಅವರೂ ಮಂತ್ರಿ ಆಗಿದ್ದಾರೆ. ಹೊಸ ಸ್ಪೀಕರ್ ಆಗಿ ನಿಮಾ ಬೆನ್ ಆಯ್ಕೆಯಾದರು.

ನರೇಶ್ ಭಾಯಿ ಪಟೇಲ್, ಹರ್ಷ ಸಿಂಘ್ವಿ, ಮನೀಶ್ ವಕೀಲ್, ಜೀತು ರಾಣಾ ಮೊದಲಾದವರು ಸಚಿವರಾಗಿದ್ದಾರೆ.