ನಿನ್ನೆ ಮಧ್ಯ ರಾತ್ರಿ ಬೆಳಗಾವಿಯ ಲಕ್ಷ್ಮಿ ನಗರದಲ್ಲಿ ಕುಂದಾಪುರ ತಾಲೂಕಿನ ಗೋಳಿಯಂಗಡಿ ಹಿಲಿಯಾಣದ 54ರ ಬಾಲಕೃಷ್ಣ ಶೆಟ್ಟಿ ಎಂಬವರನ್ನು ರೌಡಿ ಶೀಟರ್ ಒಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಆರೋಪಿ ದತ್ತ ಶಿವಾನಂದ ಜಾಂತಿಕಟ್ಟಿ ಎಂಬವನನ್ನು ಪೋಲೀಸರು ಬಂಧಿಸಿದ್ದಾರೆ. ಹಲವು ವರುಷಗಳಿಂದ ಶೆಟ್ಟಿ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದಾರೆ. ಅವರ ಕುಟುಂಬವೂ ಅಲ್ಲೇ ಇದೆ.

ಪಾನ್ ಬೀಡಾ ಅಂಗಡಿಯಲ್ಲಿ ಸಾಲ ಮಾಡಿ ಹಣ ಕೊಡದಿರುವ ಚಾಳಿಯ ಜಾಂತಿಕಟ್ಟಿ ಜೊತೆ ಶೆಟ್ಟಿ ಜಗಳ ಆಡಿದ್ದರು. ಜಾಂತಿಕಟ್ಟಿ ಬೆದರಿಕೆ ಹಾಕಿದ್ದರಿಂದ ಮಿತ್ರನ ಮನೆಗೆ ಹೋಗಿದ್ದರು. ಮಧ್ಯ ರಾತ್ರಿ ಮನೆಗೆ ಹಿಂತಿರುಗಿದಾಗ ಕಾದಿದ್ದ ಆರೋಪಿ ಒಮ್ಮೆಗೇ ನುಗ್ಗಿ ಇರಿದು ಕೊಂದಿದ್ದಾನೆ.