ಒಲಿಂಪಿಕ್ಸ್ ಅರ್ಹತೆ ಪಡೆಯುವುದೇ ಒಂದು ಸಾಧನೆ ರೇವತಿ ಆಯ್ಕೆ ಟ್ರಯಲ್ಸ್‌ನಲ್ಲಿ 53.5:5 ಸೆಕೆಂಡುಗಳಲ್ಲಿ ಓಡಿ 4*400 ಮಿಶ್ರ ಡಬಲ್ಸ್ ಓಟಕ್ಕೆ ಆಯ್ಕೆಯಾಗಿ ಟೋಕಿಯೋ ವಿಮಾನ ಹತ್ತಿದ್ದಾರೆ.
ರೇವತಿಯ ತಂದೆ ಹೊಟ್ಟೆ ಶೂಲೆಯಿಂದ, ತಾಯಿ ಜ್ವರದಿಂದ ಆರು ತಿಂಗಳ ಅಂತರದಲ್ಲಿ ಸತ್ತಾಗ ರೇವತಿಗೆ ಆರು ವರುಷ, ತಂಗಿ ಇನ್ನೂ ಎರಡು ವರುಷ ಚಿಕ್ಕವಳು. ಅಜ್ಜಿ ಕೆ. ಆರಮ್ಮಳ್ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತ ಮೊಮ್ಮಕ್ಕಳನ್ನು ಶಾಲೆ, ಕಾಲೇಜು ಓದಿಸಿದರು. ತಮಿಳುನಾಡಿನ ಮಧುರೈ ಜಿಲ್ಲೆಯ ಹಳ್ಳಿ ಸಕ್ಕಿಮಂಗಲಂ ರೇವತಿಯ ಊರು.
ಮಕ್ಕಳನ್ನು ಇಟ್ಟಿಗೆ ಗೂಡಿನ ಕೆಲಸಕ್ಕೆ ಕಳುಹಿಸಿ ಎಂದವರಿಗೆ ಅಜ್ಜಿ ಜಗ್ಗಲಿಲ್ಲ. 70 ದಾಟಿಯೂ ದುಡಿದರು. ಅದರ ಫಲ ರೇವತಿ.
ಕೋಚ್ ಕಣ್ಣನ್ ಕಣ್ಣಿಗೆ ಬಿದ್ದ ರೇವತಿ ಹಲವು ಓಟಗಳಲ್ಲಿ ಗೆದ್ದರು. ಈಗ ಟೋಕಿಯೋ ದಾರಿ ತೆರೆದಿದೆ. ಅಜ್ಜಿ ಬಾಯ್ತುಂಬ ಹೆಮ್ಮೆಯಿಂದ ನಗುತ್ತಾರೆ.