ಉಳ್ಳಾಲ ಶಕ್ತಿನಗರದ ಗೀತಾ ವಿಧವೆ, ಎರಡು ಹೆಣ್ಣು ಮಕ್ಕಳು. ಮೊದಲ ಮಗಳಿಗೆ ಮದುವೆ ಮಾಡಲು ಮಾಡಿದ ಸಾಲ ತೀರಿರಲಿಲ್ಲ. ಅದಕ್ಕೆ ಇದ್ದ ಚಿನ್ನವನ್ನೂ ಮಾರಿದ್ದರು. ಎರಡನೆಯ ಮಗಳು ಕವನಾಳ ಹೇಗೆಂದು ತಲೆಯ ಮೇಲೆ ಕೈಹೊತ್ತು ಕೂತಿದ್ದಾಗ ಮುಸ್ಲಿಂ ಬಂದುಗಳು ಆ ಮದುವೆಯನ್ನು ಸುಲಭವಾಗಿಸಿ ಮುಗಿಸಿದರು.

ಹುಡುಗಿಯ ಚಿಕ್ಕಪ್ಪ ಸಮಸ್ಯೆಯನ್ನು ಪರಿಚಯದ ಉಳ್ಳಾಲ ಮಂಚಿಲದ ಎಂ. ಕೆ. ಕುಟುಂಬ ಟ್ರಸ್ಟ್‌ಗೆ ತಿಳಿಸಿದರು. ಟ್ರಸ್ಟ್‌ನ ರಹಮಾನ್‌ ವಿಷಯ ಕೈಗೆತ್ತಿಕೊಂಡಾಗ ಕುಟುಂಬದ ಹಂಝ ನೆರವಾದರು. ಶಾಸಕ ಯು. ಟಿ.‌ ಖಾದರ್ ಸಹ ನೆರವು ನೀಡಿದರು. ಹಂಝ ಅವರ ಮನೆಯಲ್ಲಿ ಮೆಹಂದಿ, ತಲಪಾಡಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮದುವೆ ಎಲ್ಲವೂ ಮುಸ್ಲಿಂ ಬಂಧಗಳಿಂದ ಸಾಂಗವಾಗಿ ನಡೆಯಿತು.