ಹತ್ತರ ಮೇಲೆ ಎಲ್ಲ ಸಾವಿರಗಳನ್ನು ಮೊದಲಿಗರಾಗಿಯೇ ದಾಟಿದ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಚುಟುಕು ಕ್ರಿಕೆಟ್ ಟಿ20ಯಲ್ಲಿ ಈಗ 14,038 ರನ್ ಮಾಡಿ ನನ್ನ ಸನಿಹ ಯಾರೂ ಇಲ್ಲ ಎಂದಿದ್ದಾರೆ.
ಕ್ರಿಸ್ ಗೇಲ್‌ರ ಈ ಹದಿನಾಲ್ಕು ಸಾವಿರ ಪ್ಲಸ್‌ನಲ್ಲಿ 22 ಶತಕ, 87 ಅರ್ಧ ಶತಕಗಳು ಇವೆ. ಇದನ್ನು ಅವರು 423 ಇನ್ನಿಂಗ್ಸ್‌ಗಳಿಂದ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಕೀರನ್ ಪೋಲಾರ್ಡ್ 484 ಇನ್ನಿಂಗ್ಸ್‌ನಲ್ಲಿ 10,836, ಪಾಕಿಸ್ತಾನದ ಶೋಯೆಬ್ ಮಲಿಕ್ 397 ಇನ್ನಿಂಗ್ಸ್‌ನಲ್ಲಿ 10,741, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 303 ಇನ್ನಿಂಗ್ಸ್‌ನಲ್ಲಿ 10,017 ರನ್‌ಗಳನ್ನು ಗಳಿಸಿ ಅನಂತರದ ಸ್ಥಾನಗಳಲ್ಲಿ ಇದ್ದಾರೆ.