ಉತ್ತರ ಕರ್ನಾಟಕಕ್ಕೆ ಈ ಬಾರಿ ಮುಖ್ಯಮಂತ್ರಿ ಪದವಿ ಸಿಗಬೇಕು. ಅನ್ಯಾಯ ನಿಲ್ಲದಿದ್ದರೆ ಉತ್ತರ ಕರ್ನಾಟಕದ‌ ಜನ ಪ್ರತ್ಯೇಕ ರಾಜ್ಯದ ಕೂಗೆಬ್ಬಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಇಲಾಖೆಗಳ ಸಚಿವ ಉಮೇಶ ಕತ್ತಿ ಹೇಳಿದರು.

ಧಾರವಾಡದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಹೊಸ ಕಟ್ಟಡ ಶಂಕುಸ್ಥಾಪನೆಗೆ ಬಂದ ಅವರು ಪತ್ರಿಕಾ ಪ್ರತಿನಿಧಿಗಳ ‌ಜೊತೆ ಮಾತನಾಡಿದರು.

ನಾನು ಎಂಟು‌ ಬಾರಿ ಶಾಸಕ ಆಗಿದ್ದೇನೆ. ನನಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಏನೇ ಆದರೂ ಉತ್ತರ ಕರ್ನಾಟಕಕ್ಕೆ ಆದಷ್ಟು ಜರೂರು ಮುಖ್ಯಮಂತ್ರಿ ಸ್ಥಾನ ಸಿಗಬೇಕಾದುದು ನ್ಯಾಯ ಎಂದು ಅವರು ಹೇಳಿದರು.