ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಜೂನ್ 30ರಂದು ಘೋಷಿಸಿದ ವಿದ್ಯಾರ್ಥಿ ಕಾರ್ಡ್ ಸಾಲಕ್ಕಾಗಿ ಇಲ್ಲಿಯವರೆಗೆ 26,000 ಅರ್ಜಿಗಳು ಬಂದಿರುವುದಾಗಿ ಸರಕಾರ ತಿಳಿಸಿದೆ.
ಈ ಯೋಜನೆಯಡಿ ಸರಕಾರವು ಉನ್ನತ ಶಿಕ್ಷಣಕ್ಕಾಗಿ ಸುಲಭದ ರೂ. 10 ಲಕ್ಷದವರೆಗೆ ಸಾಲ ನೀಡುತ್ತದೆ.
ಈಗ ಬಂದ ಅರ್ಜಿಗಳಲ್ಲಿ 16,800 ಗಂಡು, 9,700 ಹೆಣ್ಣು ಮಕ್ಕಳದ್ದಾಗಿದೆ. ಬೇರೆ ರಾಜ್ಯಗಳಲ್ಲಿ ಓದುತ್ತಿರುವ ಬಂಗಾಳದ 6,059 ವಿದ್ಯಾರ್ಥಿಗಳೂ ಇದರಲ್ಲಿ ಇದ್ದಾರೆ.