ಮಂಗಳೂರು: ಇಂದು ದ.ಕ ಜಿಲ್ಲೆಗೆ ಭೇಟಿ ನೀಡಿದ ಶ್ರೀ ರಕ್ಷ ರಾಮಯ್ಯರವರು, ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರ ಮನೆಯಲ್ಲಿ ಉಪಹಾರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ರಾಜ್ಯದಲ್ಲಿ ಯುವಕರನ್ನು ಗುಣಮಟ್ಟದ ತರಬೇತಿಯೊಂದಿಗೆ, ತಳಮಟ್ಟದ ಕೆಲಸ ಮಾಡುವ ಸಂಘಟನಾತ್ಮಕವಾದ ಯುವಕರನ್ನು ಒಗ್ಗೊಡಿಸುವ ಕೆಲಸ, ಯುವ ಕಾಂಗ್ರೆಸ್ಸಿನಿಂದ ನಡೆಯಬೇಕಾಗಿದೆ. ಯುವ ಕಾಂಗ್ರೆಸ್ ಪಕ್ಷದ ಬುನಾದಿಯಾಗಿದ್ದು, ಶಿಸ್ತು ಮತ್ತು ಪಕ್ಷದ ನೀತಿ ಸಿದ್ಧಾಂತಗಳ ಮೇಲೆ ಬದ್ಧತೆಯಿರುವ ಯುವಕರ ತಂಡ, ಮುಂದೆ ನಡೆಯುವ ಚುನಾವಣೆಗೆ ಸಜ್ಜುಗೊಳಿಸಲು, ಈಗಾಗಲೇ ಶ್ರಮವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಐವನ್ ಡಿ ಸೋಜರವರು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ರಕ್ಷ ರಾಮಯ್ಯರವರು, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ನೀತಿ, ಸಿದ್ಧಾಂತ ಮತ್ತು ಪಕ್ಷಕ್ಕಾಗಿ ಸಮಯ ತ್ಯಾಗ ಮಾಡುವ ಯುವಕರ ತಂಡವೊಂದನ್ನು ಪ್ರತಿ ಬೂತ್ ಮಟ್ಟದಲ್ಲಿ ಸಂಘಟಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷ ರಾಮಯ್ಯ, ಡಾ.ಕವಿತಾ ಡಿ ಸೋಜ, ಕರ್ನಾಟಕ ರಾಜ್ಯ ಯುವಕಾಂಗ್ರೆಸ್ ಉಸ್ತುವಾರಿ ಸುರಭಿ ದ್ವೇದಿ, ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅನಿಲ್ ಯಾದವ್, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕರಾದ ಭವ್ಯ ಕೆ.ಆರ್., ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯಧರ್ಶಿ ದೀಪಿಕಾ ರೆಡ್ಡಿ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಮನ್ನಾರ್ ಮನನ್, , ಅಶಿತ್ ಪಿರೇರಾ ಕಾರ್ಯದರ್ಶಿ ರಾಜ್ಯ ಯುವ ಕಾಂಗ್ರೆಸ್, ಲುಕ್ಮಾನ್ ಬಂಟ್ವಾಳ, ಅಧ್ಯಕ್ಷರು, ದ.ಕ ಜಿಲಾ ಯುವ ಕಾಂಗ್ರೆಸ್ ಸಮಿತಿ, ಸರ್ಪರಾಜ್ ನವಾಜ್, ಸವಾದ್ ಗೂನಡ್ಕ, ಮೇರಿಲ್ ರೇಗೊ, ಚಿತ್ತರಂಜನ್ ಶೆಟ್ಟಿ, ಮಿಲಾಜ್ ಅತ್ತಾವರ, ಹಸನ್ ಪಳ್ನೀರ್  ಮುಂತಾದವರು ಉಪಸ್ಥಿತರಿದ್ದರು.