ಮಂಗಳೂರು: ಶಿತಿಲಾವಸ್ತೆಯಲ್ಲಿರುವ ಜೆಪ್ಪು ಮಹಾಕಾಳಿಪಡ್ಪುನಲ್ಲಿರುವ ಪೌರಕಾರ್ಮಿಕರ ವಸತಿ ಗೃಹ ಕಟ್ಟಡಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ರವರು ಇಂದು ತಾ 13.7.2021 ರಂದು ಭೇಟಿ ನೀಡಿದರು.ಬಹಳ ಹಳೆಯದಾದ ಈ ಕಟ್ಟಡದ ವ್ಯವಸ್ಥೆ ತೀರಾ ಅಪಾಯಕಾರಿಯಾಗಿದೆ. ಅನೇಕ ಪೌರ ಕಾರ್ಮಿಕರ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತ ಲೋಬೊ ರವರು,ಬಹಳಷ್ಟು ಹಳೆಯದಾದ ಈ ವಸತಿ ಗೃಹದ ಕಟ್ಟಡವು ಶಿತಿಲಾವಸ್ತೆಯಿಂದ ಕೂಡಿದೆ. ಕಟ್ಟಡದ ಹಿಂದಿನ ಭಾಗದಲ್ಲಿ ಅಲ್ಲಿಲ್ಲಿ ಬಿರುಕು ಬಿಟ್ಟಿದ್ದು, ಜನರು ಪ್ರಾಣಪಾಯದಿಂದ ಜೀವನ ಸಾಗಿಸುತ್ತಿದ್ದಾರೆ.ಜನರು ಅನೇಕ ಬಾರಿ ಪಾಲಿಕೆಗೆ ಮನವಿ ಕೊಟ್ಟಿರುತ್ತಾರೆ. ಅದನ್ನು ದುರಸ್ತಿಕರಣ ಮಾಡಲು ಪಾಲಿಕೆ ವಿಫಲವಾಗಿದೆ.ಈಗ ಅಲ್ಲಿ ವಾಸಿಸುತ್ತಿರುವ ಜನರು ಬಹಳ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ. ಅದರ ಪಕ್ಕದಲ್ಲಿ ಹೊಸ ವಸತಿ ಗೃಹ ಕಟ್ಟಡ ನಿರ್ಮಾಣವಾಗಿದೆ. ಇಲ್ಲಿಂದಲೇ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ತ್ವರಿತ ಗತಿಯಲ್ಲಿ ಅದರ ದುರಸ್ತಿ ಕಾರ್ಯ ನಡೆಯಬೇಕು. ಜೊತೆಗೆ ಕೆಲವು ಸಂದಿಗ್ದ ಕುಟುಂಬದವರನ್ನು ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಶೈಲಜಾ, ಪಕ್ಷದ ಪ್ರಮುಖರಾದ ಟಿ. ಕೆ. ಸುಧೀರ್, ಮೊಹಮ್ಮದ್ ನವಾಜ್, ಕೀರ್ತಿರಾಜ್, ಸದಾಶಿವ ಅಮೀನ್, ದುರ್ಗಾಪ್ರಸಾದ್,ನೀರಜ್ ಪಾಲ್, ದಿನೇಶ್ ಪಿ. ಎಸ್., ಉದಯ್ ಕುಂದರ್, ವಸಂತ್, ಲಕ್ಷ್ಮಣ್ ಶೆಟ್ಟಿ,ಶಾನ್ ಡಿಸೋಜಾ, ಆಸ್ಟನ್ ಸಿಕ್ವೇರಾ, ಯಶವಂತ ಪ್ರಭು ಮೊದಲಾದವರು ಉಪಸ್ಥಿತರಿದ್ದರು.