ವರದಿ / ರೋನ್ಸ್ ಬಂಟ್ವಾಳ್
ಮುಂಬಯಿ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಕಾಸರಗೋಡು ಇವರು ಗಡಿನಾಡು ಹಾಗೂ ಹೊರ ರಾಜ್ಯಗಳಲ್ಲಿ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕಲಾವಿದರಿಗಾಗಿ ಮಿಡಿಯುವ ಸಂಸ್ಥೆ. ಈಗಾಗಲೇ ರಾಷ್ಟ್ರ ಹಾಗೂ ದುಬೈ, ಮಸ್ಕತ್ ಗಳಲ್ಲಿ ಹದಿನೈದು 'ಕನ್ನಡ ಸಂಸ್ಕೃತಿ ಉತ್ಸವ'ಗಳನ್ನು ಆಯೋಜಿಸಿದೆ. ಈಗ ಈ ವರ್ಷ 'ಅನಕತಪುರಿ ಗಡಿನಾಡ ಸಂಸ್ಕೃತಿ ಉತ್ಸವ - 2024 ವು ಕೇರಳದ ತಿರುವನಂತಪುರದ ತೈಕಾಡ್ ನಲ್ಲಿರುವ 'ಭಾರತ್ ಭವನ'ದಲ್ಲಿ ಇದೆ ನವೆಂಬರ್ 27ರಂದು ಬುಧವಾರ ದಿನಪೂರ್ತಿ ಜರುಗಲಿದೆ.
ಈ ಉತ್ಸವದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ 'Gadinada Kannada Rajyotsava Award for Kannada Kala Kendra Institute'ಯನ್ನು ಪ್ರಧಾನಿಸಲಾಗುವುದು. ಈ ಪ್ರಶಸ್ತಿಗೆ ಎಪ್ಪತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮುಂಬಯಿಯ ಪ್ರತಿಷ್ಠಿತ ಕಲಾ ಸಂಸ್ಥೆ 'ಕನ್ನಡ ಕಲಾ ಕೇಂದ್ರ' ಆಯ್ಕೆಯಾಗಿದೆ