ಸತ್ಯಂವದ ಧರ್ಮoಚರ ಎಂಬ ಮಾತನ್ನು ಉಪನಿಷತಗಳಲ್ಲಿ ಉಲ್ಲೆಖಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಬಾಳನ್ನು ಬಾಳಬೇಕಾದರೆ ಸಂಸ್ಕಾರ ಹಾಗೂ ನೈತಿಕಮೌಲ್ಯಗಳ ಅರಿವು ಪಾಲನೆ ಅಗತ್ಯ. ಇತ್ತೀಚಿಗೆ ಹೆಚ್ಚುತ್ತಿರುವ ಹಿಂಸೆ ಬಾಲಪರಾಧಗಳು ಅಪ್ರಾಪ್ತ ವಯಸ್ಸಿನ ಹುಡುಗಿಯರಲ್ಲಿ ಗರ್ಭಪಾತ ವಿವಾಹ ವಿಚ್ಚೇದನ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಿಯತಮನ ಜೊತೆ ಸೇರಿ ಭಾವಿ ಪತಿಯನ್ನೇ ಕೊಂದ ವಿದ್ಯಾರ್ಥಿನಿ ದೇಶದ್ರೋಹದ ಕೇಸ್ ನಲ್ಲಿ ಪದವಿಧರನ ಬಂಧನ ಕುಡಿದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸ್ ರ ಮೇಲೆ ಯುವಕ ಯುವತಿಯರಿಂದ ಹಲ್ಲೆ. ಅನೈತಿಕ ಸಂಭಂದ ದಿನಬೆಳಗಾದರೆ ಪತ್ರಿಕೆಯಲ್ಲಿ ಸುದ್ದಿವಾಹಿನಿಗಳನ್ನ ಇಂತಹದ್ದೇ ಸುದ್ದಿಗಳನ್ನ ಕೇಳಿ ಕೇಳಿ ಬೇಸತ್ತು ಯಾಕಪ್ಪ ಈ ವಿದ್ಯಾವಂತ ಯುವ ಸಮಾಜ ಹೀಗಾಗುತ್ತಿದೆ ಎಂದು ಗೊಣಗಿಕೊಂಡು ನಮ್ಮ ದಿನಚರಿಯಲ್ಲಿ ವ್ಯಸ್ತರಾಗಿ ಬಿಡುತ್ತೇವೆ. ಆದರೆ ಎಂದಾದರು ಇದಕ್ಕೆಲ್ಲ ಮೂಲ ಕಾರಣ ಹುಡುಕಿದ್ದೀವ.? ಯುವ ಜನಾಂಗ ಈ ಸಮಾಜ ವಿರೋಧಿ ವರ್ತನೆಯ ಕಾರಣವನ್ನು ಅವಲೋಕಿಸಿದ್ದೆವಾ? ಇಲ್ಲಾ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ನಾವು ನಮ್ಮ ಮಕ್ಕಳಿಗೆ ನೀಡುವ ಒಳ್ಳೆಯ ಸಂಸ್ಕಾರ ನೈತಿಕ ಮೌಲ್ಯಗಳಿಂದ ಮಾತ್ರ. ಅದು ಹೇಗೆ ಹೇಳ್ತಿನಿ ಬನ್ನಿ.
ಮಕ್ಕಳಿಗೆ ಈ ರೀತಿಯಾಗಿ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ತುಂಬಿ
ನೈತಿಕ ಮೌಲ್ಯಗಳು ಎಂದರೇನು?
ಒಳ್ಳೆಯ ನೈತಿಕ ಮೌಲ್ಯವಿರುವ ಜನರಿಗೆ ಸರಿ ಮತ್ತು ತಪ್ಪನ್ನು ಗುರುತಿಸುವ ಸಾಮರ್ಥ್ಯ ಇರುತ್ತದೆ. ಅವರ ಮೌಲ್ಯಗಳು ತತ್ವಗಳ ಮೇಲೆ ಹೊಂದಿಕೊಂಡಿರುತ್ತವೆ ಹೊರತು ಒಂದು ಕ್ಷಣಕ್ಕೆ ಅವರಿಗೇ ಹೇಗೆ ಅನ್ನಿಸುತ್ತದೆ ಎಂಬುದರ ಮೇಲಲ್ಲ. ಹಾಗಾಗಿ ಯಾರು ನೋಡದಿದ್ದಾಗಲು ಸರಿಯಾದದನ್ನ ಮಾಡಲು ಈ ಮೌಲ್ಯಗಳು ಅವರನ್ನ ಪ್ರೆರೇಪಿಸುತ್ತವೆ.
ನಮ್ಮ ಈಗಿನ ಪಾಲಕರು ತಮ್ಮ ಮಕ್ಕಳಿಗೆ ಬೇಕಾದ ಎಲ್ಲಾ ಬೇಕುಬೇಡಿಕೆಗಳು ಸವಲತ್ತುಗಳು ಅವರಿಗೆ ಏನೆ ಬೇಕಿದ್ರೂ ಎಷ್ಟೇ ಕಷ್ಟ ಇದ್ರೂ ಎಲ್ಲವನ್ನು ನೀಡುವಲ್ಲಿ ಸಮರ್ಥರು ಇದು ಪ್ರತಿಯೊಬ್ಬ ಪಾಲಕರು ಮಾಡಲು ಬೇಕು. ಆದರೆ ಇವುಗಳ ಜೊತೆಗೆ ಸಂಸ್ಕಾರ ನೈತಿಕ ಮೌಲ್ಯಗಳನ್ನು ಸಮಯಕ್ಕೆ ಸರಿಯಾಗಿ ಕೊಡದೆ ಎಲ್ಲೋ ತಪ್ಪು ಮಾಡುತ್ತಿದ್ದಾರೆ. ಎಂಬುದು ನನ್ನ ಅನಿಸಿಕೆ.
ಪಾಲಕರೇ ನೀವು ಈಗ ಕೊಡುವ ಎಲ್ಲಾ ಸವಲತ್ತುಗಳು ನಿಮ್ಮ ಮಕ್ಕಳಿಗೆ ಈಗ ಮಾತ್ರ ಉಪಯೋಗ ಬರುತ್ತವೆ ಆದರೆ ನೀವು ನೀಡುವ ಉತ್ತಮ ಸಂಸ್ಕಾರ ಮೌಲ್ಯಗಳು ಅವರ ಜೀವನದ ಪೂರ್ತಿ ಉಪಯೋಗಕ್ಕೆ ಬಂದು ಅವರಿಗೇ ಒಂದು ಉತ್ತಮ ಭವಿಷ್ಯವನ್ನು ಕೂಡ ರೂಪಿಸುವಲ್ಲಿ ಸಹಾಯಕಾರಿಯಾಗುತ್ತವೆ. ಅದಕ್ಕೆ ನೀವು ಮಾಡಬೇಕಾದ ಕಾರ್ಯ ಇಷ್ಟೇ.
ಸರಿ ಯಾವದು ತಪ್ಪು ಯಾವದು ಎಂದು ಹೇಳಿಕೊಡಿ
ಸರಿ ತಪ್ಪನ್ನು ಗುರುತಿಸಲು ಸಹಾಯ ಮಾಡುವ ಪದಗಳನ್ನು ಉಪಯೋಗಿಸಿ ಪ್ರತಿದಿನದ ಸನ್ನಿವೇಶಗಳನ್ನು ಬಳಸುತ್ತಾ ವಿಷಯಗಳ ನಡುವಿನ ಪ್ರಾಮುಖ್ಯತೆ ವ್ಯತ್ಯಾಸಗಳನ್ನು ತಿಳಿಸಿ.*ಇದು ತಪ್ಪು ಅದು ಸರಿ ಇದು ಪ್ರಾಮಾಣಿಕತೆ ಅದು ಅಪ್ರಾಮಾಣಿಕತೆ ಇದು ದಯೆ ಅದು ನಿರ್ಧಯೇ ಇದು ನಿಷ್ಠೆ ಅದು ದ್ರೋಹ ಅಂತ ಸ್ಪಷ್ಟವಾಗಿ ಹೇಳಿಕೊಡಿ ಅವಾಗ ನಿಮ್ಮ ಮಗುವಿಗೆ ನಿಧಾನವಾಗಿ ಅರ್ಥ ಆಗುತ್ತೆ ಹೋಗುತ್ತೆ ಯಾವದು ಸರಿ ಯಾವದು ತಪ್ಪು ಅಂತ.
ಅದು ಏಕೆ ಸರಿ ಇದು ಏಕೆ ತಪ್ಪು ಎಂದು ವಿವರಿಸಿ
ಉದಾಹರಣೆಗೇ ನಾವು ಪ್ರಾಮಾಣಿಕರಾಗಿ ಇರುವದು ಯಾಕೆ ಒಳ್ಳೆಯದು ನಾವು ಪ್ರಾಮಾಣಿಕರಾಗಿ ಇಲ್ಲದೆ ಇರುವದು ಯಾಕೆ ಕೆಟ್ಟದ್ದು ಎಂದು ವಿವರಿಸಿ.ಸುಳ್ಳು ಹೇಳುವದರಿಂದರ ಗೆಳೆತನ ಸಂಭಂದಗಳು ಹಾಳಾಗುತ್ತವೆ. ಎಂಬುದು ಹೇಳಿ ಕೊಡಿ. ಕದಿಯೋದರಿಂದ ಏನು ಆಗುತ್ತೆ. ಹೀಗೆ ಚಿಕ್ಕ ಪುಟ್ಟ ಪ್ರಶ್ನೆ ಕೇಳುತ್ತೆ ಅವರಿಗೇ ಮೌಲ್ಯಗಳ ಅರಿವು ಮೂಡಿಸಬೇಕು.
ಒಳ್ಳೇ ವ್ಯಕ್ತಿ ಆಗೋದ್ರಿಂದ ಸಿಗುವ ಪ್ರಯೋಜನಗಳನ್ನು ಒತ್ತಿ ಹೇಳಿ
ನೋಡು ನೀನು ಪ್ರಾಮಾಣಿಕವಾಗಿ ಇದ್ದರೆ ಪ್ರಾಮಾಣಿಕವಾಗಿ ನಿನ್ನ ಕಾರ್ಯಗಳನ್ನು ಮಾಡಿದರೆ ನಿನಗೆ ಮುಂದೆ ಉತ್ತಮ ಭವಿಷ್ಯ ಸಿಗುತ್ತೆ ಎಲ್ಲಾ ಜನ ನಿನ್ನ ಇಷ್ಟ ಪಡ್ತಾರೆ.ಎಲ್ಲರೂ ನಿನ್ನ ನಂಬುತ್ತಾರೆ. ನೀನು ಒಬ್ಬರ ಮೇಲೆ ದಯೆ ತೋರಿಸಿದರೆ ಎಲ್ಲರೂ ನಿನ್ನ ಜೊತೆ ಇರಲು ಇಷ್ಟ ಪಡುತ್ತಾರೆ.ಎಂಬ ಮಾತುಗಳನ್ನು ಹೇಳಿ.
ನಿಮ್ಮ ಪೂರ್ತಿ ಕುಟುಂಬ ಕೂಡ ನೈತಿಕಮೌಲ್ಯಗಳಿಂದ ತುಂಬಿರಬೇಕು
ನಿಮ್ಮ ಇಡೀ ಕುಟುಂಬ ನೈತಿಕ ಮೌಲ್ಯಗಳನ್ನು ಪಾಲಿಸುವಾಗ ಮಾತ್ರ ನೀವು ಇದನ್ನೆಲ್ಲಾ ಹೇಳಲು ಸಾಧ್ಯ.ನಮ್ಮ ಕುಟುಂಬದಲ್ಲಿ ಯಾರು ಸುಳ್ಳು ಹೇಳೊಲ್ಲ.ನಾವು ಯಾರೊಬ್ಬರ ಮೇಲು ಕೈಮಾಡೋಲ್ಲ ಕೂಗಾಡಲ್ಲ ನಾವು ಒಬ್ಬರಿಗೆ ಹೀಯಾಳಿಸಿ ಮಾತನಾಡಲ್ಲ ಒಬ್ಬರಿಗೆ ನೋವಾಗೋ ರೀತಿ ನಡೆದುಕೊಳ್ಳಲ್ಲ ಎಂದು ಹೇಳಬೇಕು. ಅವಾಗ ನಿಮ್ಮ ಮಕ್ಕಳು ಆ ಎಲ್ಲಾ ಮಾತುಗಳನ್ನು ನೈತಿಕ ಮಟ್ಟಗಳನ್ನು ಬರಿ ಒಂದು ಆಜ್ಞೆಯಾಗಿ ನೋಡದೆ ಅದು ನನ್ನ ಕುಟುಂಬದ ಗುರುತಾಗಿ ನೋಡುತ್ತಾರೆ.
ಅವರಿಗೆ ಕಲಿಸಲು ಪ್ರತಿದಿನದ ಘಟನೆಗಳನ್ನು ಉಪಯೋಗಿಸಿ
ನೀವು ಕಲಿಸುತ್ತಿರುವ ಮೌಲ್ಯಗಳಿಗೂ ಟಿ ವಿ ಯಲ್ಲಿ ಅಥವಾ ಶಾಲೆಯಲ್ಲಿ ಕಲಿಸುವ ಮೌಲ್ಯಗಳ ವ್ಯತ್ಯಾಸ ಹೇಳಿ ಇಂತಹ ಸನ್ನಿವೇಶದಲ್ಲಿ ನೀನು ಏನು ಮಾಡುತ್ತೀಯಾ?.ಇಂತಹ ಸನ್ನಿವೇಶದಲ್ಲಿ ನಮ್ಮ ಕುಟುಂಬ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೇಳಿ.ಹಾಗೂ ಪ್ರತಿದಿನ ನೀವು ದುಡಿದು ಹಣ ಮಾಡಲು ಎಷ್ಟು ಕಷ್ಟ ಪಡುತ್ತೀರಾ ಎಂದು ಮನವರಿಸಿ ನಿಮ್ಮ ಕಷ್ಟಗಳ ಬಗ್ಗೆ ಮಕ್ಕಳಿಗೂ ತಿಳಿ ಹೇಳಿ ಆಮೇಲೆ ಆ ಕಷ್ಟಗಳಿಂದ ಹೊರ ಬರುವದರ ಬಗ್ಗೆಯೂ ಹೇಳಿ.ಇದರಿಂದ ಅವರಿಗೇ ನಿಮ್ಮ ಬಗ್ಗೆ ನಿಮ್ಮ ಮನೆಯ ಪರಿಸ್ಥಿತಿಯ ಬಗ್ಗೆ ಅರ್ಥವಾಗುತ್ತೆ ಮುಂದೆ ಅವರು ನಿಮ್ಮ ವ್ಯಾಪಾರಕ್ಕೆ ಸಹಾಯಕರಿಯಾಗುತ್ತಾರೆ. ಸ್ಕೂಲ್ ಕಾಲೇಜು ಹೋದಾಗ ವ್ಯರ್ಥವಾಗಿ ಹಣ ಹಾಳು ಮಾಡುವದನ್ನು ಅವರು ಯೋಚನೆ ಕೂಡ ಮಾಡಲ್ಲ.ನೀವು ಮುಕ್ತವಾಗಿ ಎಲ್ಲಾ ಹೇಳಿಕೊಂಡರೆ ಅವರು ಸಹ ತಮ್ಮ ಶಾಲಾ ಕಾಲೇಜುನ ಎಲ್ಲಾ ಮಾಹಿತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ಒಳ್ಳೇ ಕಾರ್ಯಗಳನ್ನು ಮಾಡಿದಾಗ ನಿಮ್ಮ ಮಕ್ಕಳನ್ನು ಪ್ರಶಂಶಿಶಿ
ನಿಮ್ಮ ಮಕ್ಕಳು ಒಳ್ಳೆಯ ನೈತಿಕ ಮಟ್ಟವನ್ನು ಪಾಲಿಸಿದಾಗ ಅವರನ್ನು ಪ್ರಶಂಶಿಸಿ ಏಕೆ ಹೊಗಳಿದ್ದೀರಿ ಎಂದು ಹೇಳಿ.ಮತ್ತು ನೀನು ಮಾಡಿದ ಕಾರ್ಯದಿಂದ ನನಗೆ ಸಂತೋಷವಾಗಿದೆ ಇದು ನನಗೆ ಹೆಮ್ಮೆಯ ವಿಷಯ ಎಂದು ಹೇಳಿ.ಅವಾಗ ಅವರಿಗೇ ತಾವು ಮಾಡಿದ ಕಾರ್ಯ ಒಳ್ಳೆಯದು ಎಂದು ಗೊತ್ತಾಗುತ್ತದೆ.
ತಪ್ಪು ಮಾಡಿದಾಗ ತಿದ್ದಿ
ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿಕೊಡಿ ಅವರು ಮಾಡಿರೋದ್ರಲ್ಲಿ ಏನು ತಪ್ಪಿತ್ತು ಎಂದು ತೋರಿಸಿಕೊಡಿ ಅವರ ತಪ್ಪು ನಡತೆಗೂ ಕುಟುಂಬದ ಮೌಲ್ಯಕ್ಕೂ ಇರುವ ವ್ಯತ್ಯಾಸ ತಿಳಿ ಹೇಳಿ ಈ ರೀತಿಯಾಗಿ ಅವರ ತಪ್ಪು ಹೇಳಿದಾಗ ಅವರ ಮನಸ್ಸಿಗೆ ನಾವು ತರಬೇತಿ ಕೊಟ್ಟಹಾಗೆ ಆಗುತ್ತದೆ. ಇದರಿಂದ ಮುಂದೆ ಅವರು ತಪ್ಪು ಮಾಡುವದನ್ನು ತಡೆಯಬಹುದೂ..
ಎಲ್ಲರಿಗೂ ಗೌರವ ನೀಡುವದನ್ನು ಹೇಳಿಕೊಡಿ
ಮನೆಯಲ್ಲಿ ನಮಗೆ ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಅಜ್ಜ ಅಜ್ಜಿ ಗೇ ಹೇಗೆ ನೀನು ಗೌರವ ನೀಡುತ್ತಿಯೋ ಅದೇ ತರಹ ಹೊರಗಡೆ ಕೂಡ ನೀನು ಎಲ್ಲರಿಗೂ ಹಾಗೇ ಗೌರವ ನೀಡಬೇಕು ಎಂದು ಹೇಳಿಕೊಡಬೇಕು.
ಹಾಗೂ ಕಷ್ಟದಲ್ಲಿ ಇರುವರಿಗೆ ಅಸಹಾಯಕ ಜನರಿಗೆ ನಿನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡಬೇಕು ಎಂದು ಹೇಳಿಕೊಡಿ..
ಟಿ ವಿ ಯಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ನೋಡಲು ಹೇಳಿ
ನಮ್ಮ ಮಕ್ಕಳಿಗೆ ಸಂಸ್ಕಾರ ನೈತಿಕ ಮೌಲ್ಯಗಳು ಹೇಳುವ ಅವುಗಳನ್ನ ಇನ್ನು ಹೆಚ್ಚಿಸುವಂತ ಸಿನಿಮಾ ಧಾರವಾಹಿ ಕಾರ್ಯಕ್ರಮ ನೋಡಲು ಹೇಳುವದು... ನನ್ನ ಸಲಹೆ ಹಿಂದಿಯಲ್ಲಿ ಒಂದು ಧಾರವಾಹಿ ಇದೆ ಸೋನಿ ಸಬ್ ಚಾನಲ್ ತಾರಕ್ ಮೆಹತಾ ಕಾ ಉಲ್ಟಾ ಚಷ್ಮಾ ಇದೊಂದು ಅದ್ಬುತ ಧಾರವಾಹಿ ಎಲ್ಲಾ ರೀತಿಯ ಮೌಲ್ಯಗಳನ್ನು ಹೇಳಿಕೊಡಲು ಮಕ್ಕಳಿಂದ ಹಿಡಿದು ವೃದ್ಧರು ನೋಡಲು ಇದಕ್ಕಿಂತ ಒಳ್ಳೆಯ ಧಾರವಾಹಿ ಬೇರೆ ಇಲ್ಲಾ. ಸಾಧ್ಯವಾದಷ್ಟು ಎಲ್ಲರೂ ಕುಟುಂಬ ಸಮೇತ ಈ ಧಾರವಾಹಿ ನೋಡುವ ಕೆಲಸ ಮಾಡಿ..
ನಿಷ್ಕರ್ಷ :-
ಇಲ್ಲಿ ನಾನು ಹೆಚ್ಚು ಏನು ಹೇಳಲು ಇಷ್ಟ ಪಡುವದಿಲ್ಲ.. ಬಿತ್ತಿದಂತೆ ಬೆಳೆ ಹಾಗೂ ನಾವು ಪ್ರತಿದಿನ ಮಕ್ಕಳು ಅನ್ನೋ ಚಿಕ್ಕ ಗಿಡಗಳಿಗೆ ಸಂಸ್ಕಾರ ನೈತಿಕ ಮೌಲ್ಯ ಅನ್ನೋ ನೀರನ್ನ ಪ್ರತಿದಿನ ಸಮಯಕ್ಕೆ ಸರಿಯಾಗಿ ಹಾಕುತ್ತ ಬಂದರೆ ಭವಿಷ್ಯದಲ್ಲಿ ಅದು ನಮಗೆ ಅವಶ್ಯವಾಗಿ ಒಳ್ಳೇ ಹಣ್ಣು ಹೂವು ನೆರಳು ಕೊಡುತ್ತದೆ... ಧನ್ಯವಾದಗಳು