ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನದ ಒಂದು ಅವಿಭಾಜ್ಯ ಅಂಗ. ಇಂದು ನಾವು ನಮ್ಮಗಳ ದಿನಚರಿಯ ಪ್ರತಿಯೊಂದ್ದನ್ನು ಹಾಗೂ ನಮ್ಮ ಮನಸ್ಥಿತಿಯ ಬಗ್ಗೆ ನಮ್ಮ ಮನೆಯವರ ಮುಂದೆ ತಂದೆ ತಾಯಿಯ ಮುಂದೆ ಆಪ್ತರ ಮುಂದೆ ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತಿವೋ ಇಲ್ವೋ ಗೊತ್ತಿಲ್ಲ ಆದ್ರೆ ಸಾಮಾಜಿಕ ಜಾಲತಾಣಗಳಾದ ಫೇಸಬುಕ್ ಟ್ವಿಟ್ಟರ್ ವಾಟ್ಸಪ್ಪ್ ಇನ್ಸ್ಟಾಗ್ರಾಮ್ ಗಳಲ್ಲಿ ನಿರಂತರವಾಗಿ ಸ್ಟೇಟಸ್ ಅಪ್ಡೇಟ್ ಗಳನ್ನು ಹಾಕುತ್ತಲೇ ಇರುತ್ತೇವೆ ಅಲ್ವಾ ಹ್ಯಾಪಿ ಬರ್ತ್ಡೇ ಅಮ್ಮ ಅಪ್ಪ ತಮ್ಮ ತಂಗಿ ಅಂತ ಹುಟ್ಟುಹಬ್ಬದ ಸ್ಟೇಟಸ್ ನಾವು ಕುಟುಂಬ ಸಹಿತ ಪ್ರವಾಸಕ್ಕೆ ಹೋಗುತ್ತಿದ್ದೇವೆ.ಅಂತ ಹೇಳಿ ಫೇಸಬುಕ್ ನಲ್ಲಿ ಪೂರ್ತಿ ಊರಿಗೆ ರಾಜ್ಯಕ್ಕೆ ಗೊತ್ತಾಗುವ ಹಾಗೇ ನಮ್ಮ ಮನೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇವೇ. ಇದೆ ಜಾಲತಾಣಗಳಿಂದ ಅದೆಷ್ಟೋ ಬಾಲ್ಯದ ದೂರದ ಸ್ನೇಹಿತರು ಮತ್ತೇ ಒಂದಾಗುವ ಸಿಗುವಂತಹ ಕಾರ್ಯಗಳು ಆಗಿವೆ ಹಾಗೂ ದೂರದ ಸಂಭಂದಿಗಳ ಜೊತೆಗೆ ಮನೆಯಲ್ಲೇ ಕೂತು ಒಬ್ಬರನೊಬ್ಬರು ನೋಡಿಕೊಂಡು ಮಾತನಾಡುವ ಅವಕಾಶ ಕೂಡ ದೊರಕಿದೆ. ಹಾಗೂ ಇನ್ನು ಹತ್ತಾರು ಉಪಯೋಗಗಳು ಆಗಿವೆ. ಆದರೆ ಇವೆಲ್ಲವದುರ ನಡುವೆ ಕೆಲವು ಆತಂಕದ ಸಂಗತಿಗಳು ಸಹ ಗೋಚರಿಸುತ್ತವೆ ಅವು...........
ಓದುಗರೇ ಸಾಮಾಜಿಕ ಜಾಲತಾಣದ ಮುಖ್ಯ ಅಂಗಗಳಾದ ಫೇಸಬುಕ್ ವಾಟ್ಸಪ್ಪ್ ಟ್ವಿಟ್ಟರ್ ಇನ್ಸ್ಟಾಗ್ರಾಮ್ ಗಳ ಉಪಯೋಗ ತುಂಬಾನೇ ಇದೆ ಆದರೆ ಇಂದಿನ ಪ್ರಸ್ತುತ ಸಮಾಜದ ಜನರು ಅವುಗಳ ಉತ್ತಮ ಬಳಕೆಗಿಂತ ದುರ್ಬಳಕೆ ತುಂಬಾ ಮಾಡುತ್ತ ಇದ್ದಾರೆ. ಮೊಬೈಲ್ ಫೋನ್ ಕೂಡ ತುಂಬಾನೇ ಅದ್ಬುತವಾದ ಒಂದು ಕೊಡುಗೆಯಾಗಿದೇ ಆದರೆ ನಾವುಗಳು ಅದರ ದುರ್ಬಳಕೆನೇ ಜಾಸ್ತಿ ಮಾಡೋದು... ಸಾಮಾಜಿಕ ಜಾಲತಾಣ ನಿಜ ಹೇಳಬೇಕೆಂದರೆ ನಿಜವಾಗಿಯೂ ನಮ್ಮೆಲ್ಲರಿಗೂ ಒಂದು ಒಳ್ಳೇ ವೇದಿಕೆ ಅಂದ್ರೆ ತಪ್ಪಾಗಲ್ಲ. ಎಷ್ಟೋ ಜನರು ಇದೆ ಸಾಮಾಜಿಕ ಜಾಲತಾಣದ ಸಹಾಯದಿಂದ ಸಾಕಷ್ಟು ಪ್ರಸಿದ್ಧ ಪಡೆದಿದ್ದಾರೆ. ಯಾವದೋ ಊರಲ್ಲಿ ಹಳ್ಳಿಯಲ್ಲಿ ಅವರ ಊರಿಗೆ ಹಳ್ಳಿಗೆ ಸೀಮಿತವಾದ ಪ್ರತಿಭೆಗಳು ಇದೆ ಸಾಮಾಜಿಕ ಜಾಲತಾಣದ ವೇದಿಕೆಗಳಿಂದ ಪೂರ್ತಿ ರಾಜ್ಯ ಪರಿಚಯಿಸುವಂತಹ ಪ್ರತಿಭೆಗಳಾಗಿ ಪ್ರಸಿದ್ದಿ ಪಡೆದುಕೊಂಡಿದ್ದಾರೆ..ಹಾಗೂ ಇವುಗಳ ಸಹಾಯದಿಂದ ಎಷ್ಟೋ ಅದ್ಬುತ ಮಾಹಿತಿಯನ್ನು ನಾವು ಪಡೆಯುತ್ತೇವೆ.. ಪ್ರತಿನಿತ್ಯ ನಮ್ಮ ದೇಶ ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎನ್ನುವದನ್ನು ನಮಗೆ ತಿಳಿಸುತ್ತದೆ.. ನಾವು ಬೇಸರದಲ್ಲಿ ಇದ್ದಾಗ ನಮಗೆ ಮನರಂಜನೆ ನೀಡುತ್ತವೆ... ಅವುಗಳ ಮುಖಾಂತರ ಸಾಕಷ್ಟು ವಿಚಾರಗಳನ್ನು ತಿಳಿಯುತ್ತೇವೆ. ಹೇಳ್ತಾ ಹೋದ್ರೆ ಅದು ಮುಗಿಯಲ್ಲ. ಆದರೆ ನಾವುಗಳು ಮಾಡುತ್ತಿರುವದು ಏನು? ಎಂದು ಒಮ್ಮೆಯಾದರೂ ಯೋಚನೆ ಮಾಡಿದ್ದೀರಾ ಹೇಳಿ.
ಸಾಮಾಜಿಕ ಜಾಲತಾಣದ ಬಳಕೆಯ ಮುನ್ನ ಈ ಪ್ರಶ್ನೆಗಳ ಬಗ್ಗೆ ಯೋಚಿಸಿ
ಸಾಮಾಜಿಕ ಜಾಲತಾಣದ ಬಳಕೆಯಿಂದ ನನ್ನ ಖಾಸಗಿ ವಿಷಯಗಳ ಗೌಪ್ಯತೆ ಏನಾಗುತ್ತೆ?
ಇದು ಬಹಳ ಮುಖ್ಯ ಸ್ನೇಹಿತರೆ ಇದರ ಬಗ್ಗೆ ನಾವುಗಳೆಲ್ಲ ಬಹಳ ಕಾಳಜಿ ವಹಿಸಬೇಕು. ನೀವು ಜಾಗೃತಿವಹಿಸದಿದ್ದರೆ. ನಿಮ್ಮ ಪ್ರೊಫೈಲ್ ಮಾಹಿತಿ ಫೋಟೋಗಳು ಸ್ನೇಹಿತರಿಗೆ ಸಂಭಂದಿಕರಿಗೆ ಕಳುಹಿಸಿದ ಕಿರು ಸಂದೇಶಗಳು ಯಾವ ಊರು ಯಾವ ಜಿಲ್ಲೆ ನಿಮ್ಮ ಫೋನ್ ನಂಬರ್ ವಾಸಸ್ಥಳ ಎಲ್ಲಿ ಕೆಲಸ ಮಾಡುತ್ತೀರಿ ಯಾವ ಶಾಲೆ ಕಾಲೇಜು ಯಾವ ಸಮಯದಲ್ಲಿ ಮನೆಯಲ್ಲಿ ಇರುತ್ತಿರಿ ಯಾವ ಸಮಯದಲ್ಲಿ ಇರುವದಿಲ್ಲ, ಎಂಬೆಲ್ಲ ವಿಷಯಗಳು ಬಹಿರಂಗವಾಗಿ ಬಿಡುತ್ತವೆ. ಹಾಗೂ ನೀವುಗಳು ವಿಳಾಸದ ಜೊತೆಗೆ ನಾವು ರಜೆಗೆ ಇಂತಹ ಊರಿಗೆ ಪ್ರವಾಸ ಹೋಗುತ್ತಿದ್ದೇವೆ, ಎಂಬ ಚಿಕ್ಕ್ ಸ್ಟೇಟಸ್ ಪೋಸ್ಟ್ ಹಾಕಿದರೆ ಇದು ಪರೋಕ್ಷವಾಗಿ ಕಳ್ಳರಿಗೆ ನಾವು ಮನೆಯಲ್ಲಿ ಇರುವದಿಲ್ಲ ತಾವು ಬನ್ನಿ ಅಂತ ಸ್ವತ ಆಮಂತ್ರಣ ನೀಡಿದಹಾಗೆ ಆಗುತ್ತದೆ... ಅದಕ್ಕೆ ಇವೆಲ್ಲವುದರ ಬಗ್ಗೆ ಜಾಗೃತಿ ವಹಿಸಿ.
ನೀವು ನಿಮ್ಮ ಪ್ರೊಫೈಲ್ ನಲ್ಲಿ ಈ ಮೇಲ್ ಜನ್ಮದಿನಾಂಕ ನಂಬರ್ ಅಂತಹ ವಿವರಗಳನ್ನು ಕೊಟ್ಟರೆ ಮುಂದೆ ಅದನ್ನ ಪಡೆದು ನಿಮ್ಮನ್ನು ಪೀಡಿಸುವ ಬೆದರಿಸುವ ಇಲ್ಲವೇ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದು ಅದರಿಂದ ದುರ್ಬಳಕೆ ಮಾಡುವ ಸಂದರ್ಭಗಳು ಬರಬಹುದು... ಆದ ಕಾರಣ ತಾವುಗಳು ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವದೇ ಕಾರಣಕ್ಕೂ ಹಾಕಬೇಡಿ... ಕೆಲವೊಮ್ಮೆ ಎಲ್ಲಾ ಸಿಕ್ಕಾಗ ನಿಮ್ಮ ಹೆಸರಿನ ನಕಲಿ ಐಡಿ ತಯ್ಯಾರು ಮಾಡಿ. ನಿಮ್ಮ ಹೆಸರಿಗೆ ಮಸಿ ಬಳಿಯೋ ಕಾರ್ಯ ಕೂಡ ಮಾಡಬಹುದು... ಎಚ್ಚರಿಕೆ.
ಸಾಮಾಜಿಕ ಜಾಲತಾಣದಿಂದ ನಮಗೆ ಎಂತಹ ಮಿತ್ರರು ಸಿಗುವರು?
ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು ಜ್ಞಾನಹಿನರ ಸಹವಾಸಿ ಸಂಕಟಪಡುವನು ಈ ಮಾತು ನಿಜವಾಗಿಯೂ ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಯಾರೊಟ್ಟಿಗೆ ಸ್ನೇಹ ಬೆಳೆಸಬೇಕು ಎಂದು ಜಾಗೃತೆವಹಿಸುವದು ವಿವೇಕಯುತ.ಈ ಫೇಸಬುಕ್ ನಲ್ಲಿ ಕೆಲ ಜನರು ತಮಗೆ ಯಾರೆಂದು ಗೊತ್ತಿಲ್ಲದ ಯಾವತ್ತೂ ಮುಖ ಪರಿಚಯ ಇಲ್ಲದ ನೂರಾರು ಫ್ರೆಂಡ್ ರಿಕ್ವೆಸ್ಟ್ ಗಳನ್ನು ಕನ್ಫರ್ಮ್ ಮಾಡಿಕೊಂಡು ತಮ್ಮ ಫ್ರೆಂಡ್ ಲಿಸ್ಟ್ ಜಾಸ್ತಿ ಮಾಡಿಕೊಳ್ಳುತ್ತಾರೆ... ಅದೇ ಇನ್ನು ಕೆಲ ಜನ ಆ ರೀತಿ ನೂರಾರು ರಿಕ್ವೆಸ್ಟ್ ಬಂದರು ಸಹ ಅದರಲ್ಲಿ ತಾಮಗೆ ಗೊತ್ತಿರುವ ಜನರ ಸ್ನೇಹಿತರ ಗೊತ್ತಿರುವ ಸಂಭಂದಿಕರ ರಿಕ್ವೆಸ್ಟ್ ಮಾತ್ರ ಕನ್ಫರ್ಮ್ ಮಾಡಿ ಬುದ್ದಿವಂತರಾಗುತ್ತಾರೆ... ಎಲ್ಲಾ ಹೀಗೆ ಮಾಡಬೇಕು ಓದುಗರೇ ಫೇಸಬುಕ್ ನಲ್ಲಿ ಗುರುತು ಪರಿಚಯ ಇಲ್ಲದ ಜನರ ಸ್ನೇಹ ಯಾವತ್ತೂ ಒಳ್ಳೆಯದಲ್ಲ... ಅದರಲ್ಲಿ ಒಳ್ಳೆಯ ಜನರು ಇರುತ್ತಾರೆ. ಆದರೆ ಬಹಳ ಕಡಿಮೆ ಮೋಸ ಮಾಡುವ ನಮ್ಮ ಭಾವನೆಗಳ ಜೊತೆಗೆ ಆಟ ಆಡುವ ಜನರೇ ಹೆಚ್ಚು. ಆದಾ ಕಾರಣ ಯಾವದೇ ಕಾರಣಕ್ಕೂ ಗೊತ್ತು ಗುರಿ ಇಲ್ಲದ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡು ಸಮಸ್ಯೆ ಸೃಷ್ಟಿ ಮಾಡಿಕೊಳ್ಳಬೇಡಿ...ಕೆಲ ಜನರ ಕೆಲಸನೇ ಇದು ಸ್ನೇಹಿತರು ಆಗ್ತಾರೆ ಆದ ಮೇಲೆ ನಿಮ್ಮ ಸಂಪೂರ್ಣ ಪ್ರೊಫೈಲ್ ನೋಡಿ ನೀವು ಹೆಚ್ಚು ಹೆಚ್ಚಾಗಿ ಯಾವ ವಿಷಯದ ಮೇಲೆ ಪೋಸ್ಟ್ ಮಾಡಿದ್ದೀರಾ ಎಂದು ಗಮನಿಸಿ ನಿಮ್ಮ ಆಸಕ್ತಿ ಅಭಿರುಚಿಯ ಬಗ್ಗೆ ತಿಳಿದು ಅದೇ ದಾರಿಯಲ್ಲಿ ಬಂದು ನಿಮಗೆ ಮೋಸ ಮಾಡುತ್ತಾರೆ.. ಸಾಧ್ಯವಾದಷ್ಟು ನಿಮ್ಮ ಎಲ್ಲಾ ಮಾಹಿತಿಯನ್ನು ಪ್ರೈವೇಟ ಪ್ರೈವಸಿಯಲ್ಲಿ ಇಡೀ ಕೇವಲ ನಿಮ್ಮ ಸ್ನೇಹಿತರು ಮಾತ್ರ ನಿಮ್ಮ ಪೋಸ್ಟ್ ಫೋಟೋ ವೈಯಕ್ತಿಕ ಮಾಹಿತಿಯನ್ನು ನೋಡಬೇಕು ಆ ತರಹದ ಸೆಟ್ಟಿಂಗ್ ಬಳಸಿ....
ಸಾಮಾಜಿಕ ಜಾಲತಾಣದ ಬಳಕೆಯಿಂದ ನನ್ನ ಹೆಸರು ಏನಾಗುವದು?
ಕೆಲವು ಸಲ ನಾವುಗಳು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್ಗಳ ಪ್ರಭಾವದಿಂದ ಬರುವ ಪ್ರತಿಕ್ರಿಯೆ ಹೆಸರು ಕಲ್ಲಿನ ಮೇಲೆ ಕೆತ್ತಿದ ಹಾಗೇ ಇರುತ್ತದೆ ಅದನ್ನು ಅಳಸಿ ಹಾಕುವದು ಅಸಾಧ್ಯ.ಜನರು ಸಾಮಾಜಿಕ ಜಾಲತಾಣ ಬಳಸುವಾಗ ಅವರ ವಿವೇಚನ ಶಕ್ತಿಗೆ ಏನಾಗುತ್ತೋ ಗೊತ್ತಿಲ್ಲ.ಸಾಮಾನ್ಯವಾಗಿ ಅವರು ಹೇಳದಂತ ವಿಷಯಗಳನ್ನು ಇದರಲ್ಲಿ ಹೇಳಿ ಪೆಚಿಗೆ ಸಿಲುಕಿ ತಮ್ಮ ವರ್ಷಗಳಿಂದ ಉಳಿಸಿಕೊಂಡು ಬೆಳೆಸಿಕೊಂಡು ಬಂದ ಹೆಸರನ್ನು ಹಾಳು ಮಾಡಿಕೊಳ್ಳುತ್ತಾರೆ... ನಾನು ಕೆಲವು ದಿನಗಳ ಹಿಂದೆ ಎಲ್ಲೋ ಓದಿದ ನೆನಪು ಫೇಸಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಯಿಂದ ವ್ಯಕ್ತಿ ತನ್ನ ಕೆಲಸ ಕಳೆದುಕೊಂಡ ಅಂತ...ಹಾಗೇ ಒಮ್ಮೆ ಯೋಚಿಸಿ ನಿಮ್ಮ ಪೋಸ್ಟ್ ಪೇಜ್ ಮೇಲೆ ಕಣ್ಣಾಡಿಸುವ ಬೇರೆ ಜನರು ನಿಮ್ಮ ಆಪ್ತರು ನಿಮ್ಮ ಪೋಸ್ಟ್ ಪೇಜ್ ನೋಡಿ ನಿಮ್ಮ ಬಗ್ಗೆ ಏನು ಅಭಿಪ್ರಾಯ ಪಡಬಹುದು... ನಾನು ಹಾಕುವ ಫೋಟೋ ಪೋಸ್ಟ್ ನೋಡಿ ಜನ ನನ್ನ ವ್ಯಕ್ತಿತ್ವದ ಬಗ್ಗೆ ಏನು ವರ್ಣಿಸಬಹುದು? ಯಾವೆಲ್ಲ ಪದಗಳು ಅವರ ಮನಸ್ಸಿನಲ್ಲಿ ಬರಬಹುದು? ಯಾವೆಲ್ಲ ವಿಚಾರಗಳು ಅವರ ಮನಸ್ಸಿನಲ್ಲಿ ಬರಬಹುದು? ನಿಜವಾಗಿಯೂ ನನ್ನಲ್ಲಿ ಇರುವ ಮೌಲ್ಯಗಳನ್ನು ಈ ಪೋಸ್ಟ್ ಫೋಟೋಗಳು ತೋರಿಸುತ್ತವೆಯ? ಎಂದು ಕೇಳಿಕೊಳ್ಳಿ ನಿಮಗೆ ನೀವೇ.ನಿಮ್ಮ ಹೆತ್ತವರು ಶಿಕ್ಷಕರು ಆಪ್ತ ಗೌರವಯುತ ಸಂಭಂದಿಕರು ನಿಮ್ನ ವಿಚಿತ್ರವಾದ ಪೋಸ್ಟ್ ಫೋಟೋ ನೋಡಿದರೆ ಏನು ಪದಗಳ ಬಳಕೆ ಮಾಡಬಹುದು ಒಮ್ಮೆ ಯೋಚಿಸಿ....
ಅದಕ್ಕೆ ಸ್ನೇಹಿತರೆ ನೀವು ಸಾಮಾಜಿಕ ಜಾಲತಾಣ ಬಳಕೆ ಮಾಡುವ ಸಂದರ್ಭದಲ್ಲಿ ಈ ಪ್ರಮುಖ ಮೂರು ಪ್ರಶ್ನೆ ನಿಮ್ಮನ್ನ ನೀವೇ ಕೇಳಿಕೊಳ್ಳಿ...
ಈ ಸಾಮಾಜಿಕ ಜಾಲತಾಣದ ಪ್ರಭಾವ ಬಹಳ ಪರಿಣಾಮಕಾರಿ ಇದು ವ್ಯಕ್ತಿಯ ವ್ಯಕ್ತಿತ್ವ ಸೀದಾ ಇರೋದನ್ನ ಉಲ್ಟಾ ಕೂಡ ಮಾಡುತ್ತೇ ಉಲ್ಟಾ ಇರೋದನ್ನ ಸೀದಾ ಕೂಡ ಮಾಡುತ್ತೇ... ಅದಕ್ಕೆ ನಾವು ಜಾಗೃಕರು ಆಗಬೇಕು....
ಫೇಸಬುಕ್ ನಲ್ಲಿ ಸಾಧ್ಯವಾದಷ್ಟು ನಿಮಗೆ ಪರಿಚಯ ಇರುವ ಸ್ನೇಹಿತರ ಹಾಗೂ ಸಂಭಂದಿಕರ ಫ್ರೆಂಡ್ ರಿಕ್ವೆಸ್ಟ್ ಮಾತ್ರ ಕನ್ಫರ್ಮ್ ಮಾಡಿ ಬೇರೆ ಯಾವ ಗುರುತು ಪರಿಚಯ ಇಲ್ಲದ ಜನರ ರಿಕ್ವೆಸ್ಟ್ ಕನ್ಫರ್ಮ್ ಮಾಡಬೇಡಿ... ಹಾಗೂ ನಿಮ್ಮ ಮನೆಯ ಹೆಣ್ಣುಮಕ್ಕಳ ಸಿಂಗಲ್ ಫೋಟೋ ಗಳನ್ನು ಯಾವದೇ ಕಾರಣಕ್ಕೂ ಶೇರ್ ಮಾಡಬೇಡಿ... ಬರ್ತ್ಡೇ ಇದ್ದಾಗ ಬೇರೆ ಏನೇ ಇದ್ದಾಗ... ಮತ್ತು ಯಾವದೇ ಕಾರಣಕ್ಕೂ ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಹಾಕಬೇಡಿ... ಜನ್ಮದಿನಾಂಕ ಮೊಬೈಲ್ ನಂಬರ್ ಇಮೇಲ್ ಮನೆ ಊರಿನ ವಿಳಾಸ ಕೆಲಸ ಮಾಡುವ ವಿಳಾಸ ಇತ್ಯಾದಿ... ಈಗೀಗ ಕೆಲ ಸೈಬರ್ ಅಪರಾಧಿಗಳು ನಿಮ್ಮ ಪರಿಚಯದ ಜನರ ನಕಲಿ ಐ ಡಿ ಸೃಷ್ಟಿ ಮಾಡಿ ಮೆಸ್ಸೆಂಜರ್ ನಲ್ಲಿ ಹಣ ಕೇಳುವ ಕಾರ್ಯ ಮಾಡುತ್ತಿದ್ದರೆ. ಆದ ಕಾರಣ ಅಂತಹ ಸಮಯದಲ್ಲಿ ಮುಂಜಾಗೃತ ವಹಿಸಿ.. ಯಾವದೇ ಕಾರಣಕ್ಕೂ ಫೇಸಬುಕ್ ಮೆಸ್ಸೆಂಜರ್ ನಲ್ಲಿ ನಿಮ್ಮ ಸ್ನೇಹಿತರೆ ಆಗಿರಲಿ ಸಂಭಂದಿಕರೀ ಆಗಿರಲಿ ಯಾರ ಜೊತೆಗೂ ನಿಮ್ಮ ಖಾಸಗಿ ವಿಷಯ ಖಾಸಗಿ ಫೋಟೋ ಮನೆ ವಿಳಾಸ ಹಂಚಿಕೊಳ್ಳಬೇಡಿ.... ಕೆಲವೊಮ್ಮೆ ಅವರು ನಿಮ್ಮ ಸ್ನೇಹಿತರ ಸಂಭಂದಿಕರ ನಕಲಿ ಐ ಡಿ ಸೃಷ್ಟಿ ಮಾಡಿ ಮೋಸ ಮಾಡುತ್ತ ಇರುತ್ತಾರೆ... ಎಚ್ಚರಿಕೆ.
ಎಷ್ಟೋ ಸಲ ನಾವು ಹಾಕುವ ಪೋಸ್ಟ್ ಸ್ಟೇಟಸ್ ನೋಡಿ ಜನರು ಸ್ನೇಹಿತರು ನಮ್ಮನ್ನು ನೋಡುವ ನಮ್ಮ ತಿಳಿಯುವ ದೃಷ್ಟಿಕೋನ ಬದಲಾಗಿಬಿಡುತ್ತೆ. ನಾವು ಏನೋ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವದಕ್ಕೆ ಅಥವಾ ಏನೋ ಮನರಂಜನೆಗೆ ಯಾವದೇ ವಿಡಿಯೋ ಫೋಟೋ ಶೇರ್ ಮಾಡಿದರೆ ಸ್ಟೇಟಸ್ ಇಟ್ಟರೆ. ಅವರು ನಮ್ಮನ್ನೇ ನೋಡುವ ರೀತಿನೇ ಬದಲಾಗುತ್ತೆ ಆದರೆ ಅದು ಸತ್ಯ ಅಲ್ಲಾ ಅಂತ ಅವರಿಗೆ ಗೊತ್ತಿರಲ್ಲ... ಇದು ಎಷ್ಟೋ ಸಲ ನನ್ನ ಜೊತೆಗೂ ಆಗಿದೆ... ನನಗೆ ಸ್ಯಾಡ್ ಸಾಂಗ್ ಅಂದ್ರೆ ತುಂಬಾ ಇಷ್ಟಾ ಮತ್ತು ಓಲ್ಡ್ ಲವ್ ಸಾಂಗ್ ಅಂದ್ರೆ ತುಂಬಾ ಇಷ್ಟಾ... ನಾನು ಕೆಲವೊಮ್ಮೆ ಸ್ಯಾಡ್ ಸಾಂಗ್ ಇಟ್ಟಾಗ ನನ್ನ ಸ್ನೇಹಿತರು ಸಂಭಂದಿಕರು ಅದನ್ನ ನೋಡಿ ಯಾಕೆ ನವೀನ ಏನಾಯ್ತು ಇಷ್ಟು ದುಃಖ ಭರಿತ ಹಾಡು ಸ್ಟೇಟಸ್ ಇಟ್ಟಿಯ ಅಂತ ಕೇಳಿದ್ದು ಇದೆ... ಹಾಗೂ ಲವ್ ಸಾಂಗ್ ಸ್ಟೇಟಸ್ ಇಟ್ಟಾಗ.. ಅವರೇ ಕಾಲ್ ಮಾಡಿ ನವೀನ ಏನು ಪಾ ಇವತ್ತು ಹಾಡು ಜೋರಾಗಿದೆ ಯಾರು ಹುಡುಗಿ ಅಂತ ಕೇಳಿರೋ ಉಧಾಹರಣೆ ಕೂಡ ಇದೆ.. ಹಾ ಹಾ ಹಾ ಈಗಿನ ಜನ ನಮ್ಮ ಪೋಸ್ಟ್ ಸ್ಟೇಟಸ್ ನೋಡಿ ನಮ್ಮ ಬಗ್ಗೆ ಅಳಿಯುತ್ತಾರೆ... ಇದು ವಿಪರ್ಯಾಸ... ಈಗಿನ ಜನರು ಕಣ್ಣಿಗೆ ಕಾಣಿದ್ದು ಮಾತ್ರ ನಂಬುತ್ತಾರೆ ಅದರ ಹಿಂದೆ ಇರುವ ಒಳ ಅರ್ಥದ ಬಗ್ಗೆ ಯಾರು ಯೋಚಿಸುವದಿಲ್ಲ..
ಅದಕ್ಕೆ ಓದುಗರೇ ಈ ಸಾಮಾಜಿಕ ಜಾಲತಾಣ ಅನ್ನೋ ಮಾಯಾಜಾಲದಲ್ಲಿ ಹುಷಾರಾಗಿ ಇರಿ..... ನಿಮ್ಮ ಒಂದು ಸಣ್ಣ ತಪ್ಪು ನಿಮ್ಮ ಒಳ್ಳೆಯ ಹೆಸರು ಪ್ರತಿಷ್ಠೆ ಜೀವನ ಎಲ್ಲಾ ನುಂಗಿಬಿಡುತ್ತೆ...
Article by
ನವೀನ ಗೋಪಾಲಸಾ ಹಬೀಬ
M. A B. Ed ಮುಂಡರಗಿ ಗದಗ ಜಿಲ್ಲೆ