ಪ್ರಿಯ ಓದುಗರೇ ನಾನು ಚಿಕ್ಕವನಾಗಿದ್ದಾಗ ಒಂದು ಹಾಡನ್ನ ಬಹಳ ನೋಡ್ತಾ ಇದ್ದೆ ಬಹಳ ಕೇಳ್ತಾನು ಇದ್ದೆ ಅವಾಗ ಆ ಹಾಡು ನೋಡೋದಕ್ಕೆ ತುಂಬಾ ಇಷ್ಟಾ ಅವಾಗ ಆ ಹಾಡಿನ ಅರ್ಥ ಮಹತ್ವ ಒಂದು ಚೂರು ಗೊತ್ತಿರಲಿಲ್ಲ ಆದರೆ ಈಗ ಆ ಹಾಡಿನ ಮಹತ್ವ ಶಕ್ತಿ ಎಂತದ್ದು ಅಂತ ಗೊತ್ತಾಗ್ತಾ ಇದೆ.

ಆ ಹಾಡು, ""ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿಯುವದು""ಅಂತ ನೋಡಿ ಈ ಸಾಲುಗಳಲ್ಲಿ ಎಂತಹ ಅರ್ಥ ಅಡಗಿದೆ.

ಓದುಗರೇ ನಿಜವಾಗಿಯೂ ಒಬ್ಬರ ಬಗ್ಗೆ ಸರಿಯಾಗಿ ತಿಳಿಯದೆ ಅರಿಯದೆ ಅವರ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳದೆ ನಾವುಗಳು ನಮ್ಮ ಕಣ್ಣುಗಳ ಮುಂದೆ ಕಾಣುವ ದೃಶ್ಯಾವಳಿಯನ್ನ ನೋಡಿ ಕೇಳುವ ಮಾತುಗಳನ್ನ ಕೇಳಿ ಒಬ್ಬ ವ್ಯಕ್ತಿಯ ಬಗ್ಗೆ ಕೇವಲವಾಗಿ ಮಾತನಾಡಬಾರದು. ಏಕೆಂದರೆ ನಮ್ಮ ಕಣ್ಣುಗಳ ಮುಂದೆ ಕಾಣುವ ದೃಶ್ಯ ಮುಂದೆಯಿಂದ ನಿಜವಾಗಿ ಕಂಡರೂ ಒಳ ಅರ್ಥದಲ್ಲಿ ಅದು ಸುಳ್ಳಾಗಿರಬಹುದು. ಇವತ್ತಿನ ಈ ಪ್ರಸ್ತುತ ಸಮಾಜದಲ್ಲಿ ವರ್ಷಗಳಿಂದ ಘಟ್ಟಿಯಾಗಿ ಇರುವ ಸಂಭಂದಗಳು ಹಾಳಾಗ್ತಾ ಇರೋದಕ್ಕೆ ಮುರಿದು ಬೀಳ್ತಾ ಇರೋದಕ್ಕೆ ಕಾರಣ ಈ "ತಪ್ಪು ಕಲ್ಪನೆ "

ನಾನು ಈ ವಿಷಯದ ಲೇಖನ ಬರಿಯಲು ಕಾರಣ ನನ್ನ ಸ್ನೇಹಿತನ ಜೊತೆ ನಡೆದ ಒಂದು ಘಟನೆ ಅದು ಏನೆಂದರೆ

ನನ್ನ ಸ್ನೇಹಿತ ಒಬ್ಬ ಸಾಧಾರಣ ಸುಂದರವಾದ ಯುವಕ ಅವನು ತಾನಾಯ್ತು ತನ್ನ ಓದಾಯ್ತು ಅಂತ ಇರೋ ಹುಡುಗ. ಅವನು ಒಂದು ದಿನ ತನ್ನ ಕೆಲಸದ ನಿಮಿತ್ತ ಹುಬ್ಬಳ್ಳಿ ಗೇ ಹೋಗಿದ್ದಾನೆ. ಅಲ್ಲಿ ಹೋಗಿ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ತನ್ನ ಕಾರ್ಯ ಕಾಯಕ ಎಲ್ಲಾ ಮಾಡಿ ಒಂದು ಹೋಟೆಲ್ ಗೇ ಊಟ ಮಾಡೋಕೆ ಅಂತ ಹೋಗಿದ್ದಾನೆ ಅಲ್ಲಿ ಹೋಗಿ ಖಾಲಿ ಇರೋ ಒಂದು ರೂಂ ನಲ್ಲಿ ಹೋಗಿ ಕೂತು ತನಗಾಗಿ ಪೂರಿ ಹೇಳಿದ್ದಾನೆ. ಅದೇ ಸಮಯದಲ್ಲಿ ಹೋಟೆಲ್ ನ ಬೇರೆ ಎಲ್ಲಾ ರೂಂ ಭರ್ತಿ ಆಗಿರೋದನ್ನ ನೋಡಿ ಒಂದು ಹುಡುಗಿ ನನ್ನ ಸ್ನೇಹಿತ ಕೂತ ರೂಂ ಗೇ ಬಂದು ಅವನ ಮುಂದೆ ಕೂತು ಅವಳು ಸಹ ಪೂರಿ  ಹೇಳಿದ್ದಾಳೆ ಹೀಗೆ ಅವರು ತಮ್ಮ ಪಾಡಿಗೆ ತಾವು ಕುತ್ಕೊಂಡು ಪೂರಿ ತಿನ್ನುತ್ತಾ ಕೂತಿದಾರೆ ನನ್ನ ಸ್ನೇಹಿತನಿಗೆ ಆ ಹುಡುಗಿ ಯಾರು ಗೊತ್ತಿಲ್ಲ ಆ ಹುಡುಗಿ ಗೇ ನನ್ನ ಸ್ನೇಹಿತ ಯಾರು ಅಂತ ಗೊತ್ತಿಲ್ಲ.

ಅದೇ ಸಮಯಕ್ಕೆ ಆ ಹೋಟೆಲ್ ಗೇ ಒಬ್ಬ ವ್ಯಕ್ತಿಯ ಆಗಮನ ಆಗುತ್ತದೆ ಆ ವ್ಯಕ್ತಿ ಬೇರೆ ಯಾರು ಅಲ್ಲ ನನ್ನ ಸ್ನೇಹಿತನಿಗೆ ಗೊತ್ತು ಮಾಡಿದ ಹುಡುಗಿಯ ಚಿಕ್ಕಪ್ಪ ಅವರು ನನ್ನ ಸ್ನೇಹಿತನನ್ನು ನೋಡಿ ನಮ್ಮ ಅಣ್ಣನ ಮಗಳನ್ನ ಮದುವೆ ಆಗೋ ಹುಡುಗ ಇಲ್ಲಿ ಬೇರೆ ಹುಡುಗಿ ಜೊತೆ ಊಟ ಮಾಡ್ತಾ ಇದ್ದಾರೆ ಅಂತ ನೋಡಿ ಅದನ್ನ ಒಂದು ಫೋಟೋ ತೆಗೆದು ಅದನ್ನ ತಪ್ಪಾಗಿ ಭಾವಿಸಿ ಅದರ ಪೂರ್ತಿ ಸತ್ಯತೆಯನ್ನ ತಿಳಿಯದೆ  ಅದನ್ನ ಎಲ್ಲರಿಗೂ ತಿಳಿಸಿ  ದೊಡ್ಡದಾಗಿ ಬಿಂಬಿಸುತ್ತಾರೆ.

ನನ್ನ ಸ್ನೇಹಿತ ಎಷ್ಟು ತಿಳಿ ಹೇಳುತ್ತಾನೆ ಆ ಹುಡುಗಿ ಯಾರು ನನಗೆ ಗೊತ್ತಿಲ್ಲ ಅವರಿಗೂ ನನಗು ಸಂಭಂದಇಲ್ಲಾ ಅಂತ ಎಷ್ಟು ಬೇಡಿ ಹೇಳಿದರು ಯಾರು ಅವನ ಮಾತನ್ನು ಕೇಳುವದಿಲ್ಲ ಅದನ್ನೇ ನಂಬಿ ಗೊತ್ತಾಗಿರೋ ಸಂಭಂದ ಮುರಿಯುತ್ತಾರೆ.

ನೋಡಿ ಸ್ನೇಹಿತರೆ ಒಂದು ತಪ್ಪು ಕಲ್ಪನೆ ಎಂತಹ ಅನಾಹುತ ಸೃಷ್ಟಿ ಮಾಡಿತು ಅದಕ್ಕೆ ಹೇಳೋದು ನೋಡಿದ್ದು ಸುಳ್ಳಾಗಬಹುದು ಅಂತ.

ಒಂದು ಚಿಕ್ಕ ತಪ್ಪುಕಲ್ಪನೆ ನಮ್ಮ ಜೀವನವನ್ನೇ ಹಾಳು ಮಾಡಿಬಿಡಬಹುದು ಅದಕ್ಕೆ ನೋಡಿದ್ದು ಹಾಗೂ ಕೇಳಿದ್ದು ನೋಡಿ ಯಾವದೇ ದುಡುಕು ನಿರ್ಧಾರ ತಗೋಬಾರದು. ಆ ವಿಷಯದ ಬಗ್ಗೆ ಪೂರ್ಣ ಪ್ರಮಾಣವಾಗಿ ವಿಚಾರಿಸದೆ ಯೋಚಿಸದೆ ಒಬ್ಬರ ಬಗ್ಗೆ ಹಗುರವಾಗಿ ಮಾತನಾಡಬಾರದು. ಇದರಿಂದ ಎಲ್ಲರ ನೆಮ್ಮದಿ ಹಾಳು

ಹಾಗೇ ಯೋಚಿಸಿ ಸ್ನೇಹಿತರೆ ನಾವು ಪ್ರತಿನಿತ್ಯ ಕಾಲೇಜ್ ಗೋ ಕೆಲಸಕ್ಕೋ ಅಂತ ಅಥವಾ ಪಕ್ಕದ ಊರಿಗೇ ಬಸ್ಸಿನಲ್ಲಿ ಹೋಗುವಾಗ 2 ಜನ ಕುರುವ ಸಿಟಿನಲ್ಲಿ ನಾವು ಕುಳಿತುಕೊಂಡಾಗ ನಮ್ಮ ಪಕ್ಕಕ್ಕೆ ಯಾರು ಬೇಕಾದ್ರು ಬಂದು ಕುಳಿತುಕೊಳ್ಳಬಹುದು ಹಾಗಿದ್ದಾಗ ನಾವು ಅದನ್ನ ತಪ್ಪಾಗಿ ಭಾವಿಸಬಾರದು.

ಈ ತಪ್ಪು ಕಲ್ಪನೆ ಇಂದ ವರ್ಷಗಳಿಂದ ಜೋಪಾನವಾಗಿ ಇಟ್ಕೊಂಡು ಬಂದ ಪ್ರೀತಿ ವಿಶ್ವಾಸ ನಂಬಿಕೆ ಒಂದೇ ಕ್ಷಣದಲ್ಲಿ ಚುರುಚುರಾಗಿ ಹೋಗುತ್ತದೆ. ಅದಕ್ಕೆ ಹೇಳೋದು,, ""ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿವುದು""ಅಂತ.

Article by

ನವೀನ ಗೋಪಾಲಸಾ ಹಬೀಬ
ಶಿಕ್ಷಕರು ಜೆ ಎಸ್ ಎಸ್ ಪಬ್ಲಿಕ್ ಸ್ಕೂಲ್ ಹೂವಿನಹಡಗಲಿ