ಜಗತ್ತಿನ ಜನರು ಪ್ರೀತಿಸುವ ಹಣ್ಣುಗಳಲ್ಲಿ ಒಂದಾದ ಪಪ್ಪಾಯಿ ಪ್ರತಿ ವರುಷ ಆರು ಕೋಟಿ ಟನ್ ಉತ್ಪಾದನೆ ಆಗುತ್ತದೆ. ಪಪ್ಪಾಯಿಯ ಬೇಸಾಯ ಮತ್ತು ಮೂಲ ತೆಂಕಣ ಮೆಕ್ಸಿಕೋ ಮತ್ತು ಕೋಸ್ಟಾರಿಕಾ ಆಗಿದೆ.
ಇದು ತನ್ನ ಮದ್ಗುಣ ಮತ್ತು ಉತ್ತಮ ಪೋಷಕಾಂಶಗಳಿಂದ ವಾಣಿಜ್ಯ ಮಹತ್ವದ ಹಣ್ಣು ಎನಿಸಿದೆ. ಕಾರಿಕಾ ಪಪಾಯ ಉಷ್ಣ ವಲಯದ ಹಣ್ಣಾಗಿದೆ.
ಇಂಡೋನೇಶಿಯಾದಲ್ಲಿ ಇದರ ಎಲೆಯನ್ನು ಔಷಧಿಯಾಗಿ ಬಳಸುತ್ತಾರೆ. ಪಪ್ಪಾಯಿಯ ಸೊನೆ ಮತ್ತು ಕೆಲವು ಅಂಶಗಳು ಹಲವಾರು ಆಹಾರ ಮತ್ತು ಮದ್ದು ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಏಶಿಯಾದಲ್ಲಿ ಪಪ್ಪಾಯಿ ಕಾಯಿಯನ್ನು ಬಳಸಿ ಸಾಂಬಾರು ಪಲ್ಯ ಮಾಡುತ್ತಾರೆ.