ನಮ್ಮೂರಿನ ಇಲ್ಲವೇ ಯಾವುದೇ ಒಂದು ಊರಿನ ಚಿತ್ರ ಅಲ್ಲವೇ ನೆಲಪಟ ಬಿಡಿಸಿದರೆ ಅದರಲ್ಲಿ ನೀವು ಇಲ್ಲವೇ ನಾವೊಂದು ಬೊಟ್ಟು.

ಕರ್ನಾಟಕದ ಅಥವಾ ಭಾರತದ ಭೂಪಟ ಬರೆದರೆ  ಪೇರೂರು ಇಲ್ಲವೇ ನಿಮ್ಮೂರು ಒಂದು ಬೊಟ್ಟು. ನಮ್ಮ ಲೋಕ ಭೂಪಟದಲ್ಲಿ ಕರ್ನಾಟಕ ಒಂದು ಬೊಟ್ಟು. ನೇಸರ ಸಂಸಾರದ ಚಿತ್ರದಲ್ಲಿ ಭೂಮಿಯೇ ಒಂದು ಬೊಟ್ಟು. 

ನಮ್ಮ ಬೆಂಗದಿರ ಕುಟುಂಬದಲ್ಲಿ ಎಂಟು ಗ್ರಹಗಳಿರುವುದು ನಮಗೆ ಗೊತ್ತು. ಆದರೆ ಹನ್ನೆರಡು ಗ್ರಹಗಳು ಇದ್ದು ನಾಲ್ಕನ್ನು ಸಣ್ಣದೆಂದು ಹೊರಗಿಡಲಾಗಿದೆ. ಇತರ ನಾಲ್ಕು ಯಾವುದೆಂದರೆ ಸೆರೆಸ್, ಪ್ಲೂಟೊ, ಚಾರೋನ್ ಮತ್ತು ಯುಡಿ313

ನಮ್ಮ ಹಾಲು ಹಾದಿ ಗ್ಯಾಲಾಕ್ಸಿಯಲ್ಲಿ 100 ಬಿಲಿಯನ್ ನಕ್ಷತ್ರಗಳಿವೆ.

ವಿಶ್ವದಲ್ಲಿ ಹತ್ತು ಬಿಲಿಯನ್ ಗ್ಯಾಲಕ್ಸಿಗಳಿವೆ. ಒಟ್ಟು ತಾರೆಗಳ (ಸೂರ್ಯರ) ಸಂಖ್ಯೆ 1.5 ಟ್ರಿಲಿಯನ್. ಒಟ್ಟು ಒಂದು ಬಿಲಿಯನ್ ಟ್ರಿಲಿಯನ್ ಗ್ರಹಗಳು ಇವೆ.

ಶನಿ ಗ್ರಹದ ಸುತ್ತ 100 ಚಂದ್ರರಿದ್ದಾರೆ. ಇತರ ಕ್ಷುದ್ರ ಕಾಯಗಳು ಸಹ ಈ ವಿಶ್ವದಲ್ಲಿವೆ. ಆದರೆ ಭೂಮಿ ಮಾದರಿಯದು ವಿಶ್ವದಲ್ಲಿ ಎಲ್ಲೂ ಇಲ್ಲ. ಅದರಲ್ಲಿ ಸುಂದರವಾದುದು ನಮ್ಮ (ಬಾಡಿಗೆಯವರಿಗೂ) ಮನೆ.