ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಅಲಂಗಾರಿನ ಈಶ್ವರ ಭಟ್ ಅವರ ಮೊಮ್ಮಗ, ಸುಬ್ರಹ್ಮಣ್ಯ ಹಾಗೂ ಸುಜಾತ ಭಟ್ ಅವರ ಮಗ ಪ್ರಸ್ತುತ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಕೊನೆಯ ಪದವಿ ತರಗತಿಯಲ್ಲಿ ಕಲಿಯುತ್ತಿರುವ ಸುಮಂತ್ ಭಟ್ ಇತ್ತೀಚೆಗೆ ನಡೆದ 62ನೇ ರಾಷ್ಟ್ರೀಯ ಅಖಿಲ ಭಾರತ ಶಾಸ್ತ್ರೀಯ ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
ಉತ್ತರಾಖಂಡ ದ ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದಲ್ಲಿ ನಡೆದ ಈ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಬಾಬಾ ರಾಮ್ದೇವ್ ಮತ್ತು ಉತ್ತರಖಂಡದ ಮುಖ್ಯಮಂತ್ರಿ, ಪುಷ್ಕರ ಸಿಂಗ್ ಧಾಮಿ ಅವರ ಸಮಕ್ಷಮದಲ್ಲಿ ಚಿನ್ನದ ಪದಕದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ.