ಮೂಡುಬಿದಿರೆ: ಗುರುಗಳ ಬಸದಿ ಒಂಬತ್ತನೇ ವಾರ್ಷಿಕೋತ್ಸವ ಕಾರ್ಯಕ್ರಮ 22.03.2025 ಶನಿವಾರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯಮಹಾ ಸ್ವಾಮೀಜಿ ಮಾರ್ಗದರ್ಶನ ಪಾವನ ಸಾನಿದ್ಯದಲ್ಲಿ ಜರುಗಿತು.

ಬೆಳಿಗ್ಗೆ 8.35ಕ್ಕೆ ತೋರಣ ಮಹೂರ್ತ, ವಿಮಾನ ಶುದ್ದಿ ಮೇಗಿನ ನೆಲೆಯಲ್ಲಿ ಶ್ರೀ ಮಂದಾರ ತೀರ್ಥoಕರರ ಅಭಿಷೇಕ  ಮದ್ಯಾಹ್ನ ಮೂಲ ಸ್ವಾಮಿಯ ನಯ ನೋನ್ಮಿಲನ ಮುಖ ವಸ್ತ್ರ ಉದ್ಘಾಟನೆ ಮಾಡಿ ಶ್ರೀ ಜಿನ ದರ್ಶನ ಮಹಾ ಮಂಗಳ ಆರತಿಯೊಂದಿಗೆ ಮಾಡಿ ಭಗವಾನ್ 1008 ಪಾರ್ಶ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ಸರಸ್ವತಿ ಪೂಜೆ ಪದ್ಮಾವತಿ ಶೋಡಶೋಪಾಚಾರ ಪೂಜೆ, ಕ್ಷೇತ್ರ ಪಾಲ ಪೂಜೆ,ನಾಗ ದೇವರ ಪೂಜೆ ವಿವಿಧ ಪೂಜಾ ಸೇವಾ ದಾತರರಿಂದ ನೆರವೇರಿತು.

ಆಶೀರ್ವಾದ ಮಾಡಿದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ವೀತರಾಗ ಭಗವಂತ ಸಂಸಾರದ ತಾಪತ್ರಯ ದೂರ ಮಾಡುವ ಸರ್ವಜ್ಞ ದೇವರು ಮಾನವ ಕಲ್ಲಿನಲ್ಲಿ ದೇವರ ಮಹಿಮೆ ಗುಣ ನೋಡಿ ತನ್ನಲ್ಲಿರುವ ಕಲ್ಮಶ ಭಾವ ತೊರೆದು ನಿಷ್ಕಲ್ಮಶವಾಗುದು ಸಾಧ್ಯ ಎಂದು ನುಡಿದರು. 

ಮಧ್ಯಾಹ್ನ 2.00 ರಿಂದ ಕಲಿ ಕುಂಡ ಆರಾಧನೆ ಶಂಭವ್ ಕುಮಾರ್ ರಾಜೇಶ್ವರಿ ದಂಪತಿಗಳು ನೆರವೇರಿಸಿದರು, ಬಳಿಕ ಸ್ವಾಮೀಜಿಗಳವರ ಪಾದ ಪೂಜೆ ನೆರವೇರಿತು.

ನಾಗೇಂದ್ರ ಪುರೋಹಿತ ಬಳಗದವರು ಪೂಜೆ ಆರಾಧನೆ ನೆರವೇರಿಸಿದರು. ಮುಕ್ತೇ ಸರ ರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಬೆಟ್ ಕೇರಿ,ಆದರ್ಶ್ ಕೊಂಡೆ ಮನೆತನ  ಮಂಜುಳಾ ಅಭಯ ಚಂದ್ರ, ಶ್ರೀನಾಥ್ ಬಲ್ಲಾಳ್, ವೀರೇಂದ್ರ ಜೈನ್, ಬಾಹುಬಲಿ ಪ್ರಸಾದ್, ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು,