ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆ ಯಲ್ಲಿ 24ನೇ ತೀರ್ಥಂಕರ ಭ|| ಶ್ರೀ ಮಹಾವೀರ ಸ್ವಾಮಿ 2623ನೇ ಜನ್ಮ ಕಲ್ಯಾಣ ವನ್ನು ನೆರವೇರಿಸಲು ಕೆ. ಕೃಷ್ಣ ರಾಜ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಧರ್ಮಬಂಧುಗಳಿಂದ ಒದಗಿ ಬಂದ ದೇಣಿಗೆಯಲ್ಲಿ ಉಳಿಕೆ ಹಣ ಸುಮಾರು ರೂ. 50,000ವನ್ನು ಬ್ಯಾಂಕ್ ಬಡ್ಡಿ ಸಹಿತ ಶ್ರೀ ಜೈನ ಮಠಾಧೀಶ ಭಟ್ಟಾರಕ ಚಾರುಕೀತಿ೯ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರಿಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು.
2025ರ ಮಹಾವೀರ ನಿರ್ಮಾಣೋತ್ಸವ ವನ್ನು ಜರಗಿಸುವ ಕುರಿತಾಗಿ ಮಾ. 19ರಂದು ಶ್ರೀಮಹಾವೀರ ಸಂಘದಲ್ಲಿ ಕೆ. ಕೃಷ್ಣರಾಜ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸಮಿತಿಯನ್ನು ಅಧ್ಯಕ್ಷರ ಪ್ರಸ್ತಾವನೆಯ೦ತೆ ಬುರ್ಖಾಸ್ತು ಮಾಡಲಾಯಿತು.
ಮುಂದಿನ ದಿನಗಳಲ್ಲಿ ಮಹಾವೀರ ನಿರ್ವಾಣೋತ್ಸವವನ್ನು ಜರಗಿಸಲು ಪ್ರತ್ಯೇಕ ಯಾವುದೇ ಸಮಿತಿ ರಚಿಸದೆ, ಮೂಡುಬಿದಿರೆ ಜೈನಮಠ ದ ಪ. ಪೂ ಚಾರುಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ನಡೆಸಿಕೊಂಡು ಬರುವುದಾಗಿ ಸರ್ವಾನುಮತ ದಿಂದ ನಿರ್ಣಯಿಸಲಾಯಿತು.
ಸಮಿತಿಯ ಪದಾಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.