ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಸ್ಥಳೀಯವಾಗಿ ಪಂಚ ಗ್ಯಾರಂಟಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ವಿಲೇವಾರಿ ಹಾಗೂ ಯುವನಿಧಿ ನೋಂದಣಿ ಶಿಬಿರ ಸಮಾಜ ಮಂದಿರದಲ್ಲಿ ಫೆಬ್ರವರಿ 4 ರಂದು ನಡೆಯಿತು. ಶಿಬಿರವನ್ನು ದೀಪ ಬೆಳಗಿ ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಭರತ್ ಮುಂದೋಡಿ ಮಾತನಾಡಿದರು. ವಿಪಕ್ಷಗಳ ಟೀಕೆಗಳಿಗೆ ಸರಕಾರ ಸೂಕ್ತ ಉತ್ತರ ನೀಡಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಲ್ಲಾ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದೆ. ರಾಜ್ಯದ ಜಿಡಿಪಿ ಕೂಡ ಹೆಚ್ಚಿದೆ. ಈ ಕಾರ್ಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿ 90 ಶೇಕಡಾ ಅನುಷ್ಠಾನಗೊಂಡಿದೆ ಎಂದರು. 

ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾತನಾಡಿ ರಾಜ್ಯ ಸರ್ಕಾರ ಬಡವರಿಗೆ ಆದ್ಯತೆ ನೀಡಿ ಪ್ರಥಮವಾಗಿ ಗ್ಯಾರಂಟಿ ಅನುಷ್ಠಾನ ಗೈದಿದೆ ಎಂದರು. ಮೂಡುಬಿದಿರೆ ತಾಲೂಕಿನ ಪಂಚ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮುಲ್ಕಿ ಗ್ಯಾರಂಟಿ ಸಮಿತಿಯ ಅಲ್ವಿನ್ ಲೋಬೋ, ಮಹಿಳಾ ಇಲಾಖೆಯ ಶುಭ, ವಾಹನ ಇಲಾಖೆಯ ನಿರ್ಮಲಾ, ಮೆಸ್ಕಾಂ ನ ಬುಶ್ರಾ, ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ್ ಸ್ವಾಗತಿಸಿದರು. ಶಿವಾನಂದ ಪಾಂಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.