ಗಂಗಾವತಿಯಿಂದ ಕುಷ್ಟಗಿ ಮಾರ್ಗವಾಗಿ ಗುಜರಾತಿಗೆ ಕಳ್ಳ ಸಾಗಣೆ ನಡೆಸಿದ್ದ 8,10,222 ರೂಪಾಯಿ ಮೌಲ್ಯದ ಅನ್ನ ಭಾಗ್ಯದ ಅಕ್ಕಿಯನ್ನು ವಣಗೇರಾ  ಟೋಲ್ ಪ್ಲಾಜಾದಲ್ಲಿ ವಶಪಡಿಸಿಕೊಳ್ಳಲಾಯಿತು.

ಗಂಗಾವತಿಯ ಅಭಿಜಿತ್ ಟ್ರೇಡರ್ಸ್‌ನಿಂದ ಗುಜರಾತಿನ ಜಟಿಲಪುರ ವಿನಲ್ ರೈಸ್ ಮಿಲ್ಲಿಗೆ ಈ ಅನ್ನ ಭಾಗ್ಯದ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.

50 ಕಿಲೋ ತೂಕದ 680 ಚೀಲಗಳಲ್ಲಿ 340 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಆಹಾರ ನಿರೀಕ್ಷಕ ನಿತಿನ್ ಅಗ್ನಿ ಅವರು ದಾಳಿ ಮಾಡಿ ಅಕ್ರಮ ಸಾಗಣೆ ತಡೆದರು. ಅಕ್ಕಿ, ಲಾರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಚಾಲಕ ಮದನ್ ಲಾಲ್ ಬ್ರಿಜ್ ಲಾಲ್ ನನ್ನು ಬಂಧಿಸಲಾಗಿದೆ. ಗಂಗಾವತಿಯ ಅಭಿಜಿತ್ ಟ್ರೇಡರ್ಸ್ ಮೇಲೂ ಮೊಕದ್ದಮೆ ದಾಖಲಿಸಲಾಗಿದೆ.