ಬಿಜೆಪಿ ಸರಕಾರದ ಬೆಲೆಯೇರಿಕೆ ಮತ್ತು ದೇವಾಲಯ ಕೆಡವುವ ರಾಜಕೀಯದ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಡುಬಿದ್ರಿ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಮಾಜೀ ಸಚಿವ ವಿನಯಕುಮಾರ್ ಸೊರಕೆ ಅವರು ಮೆರವಣಿಗೆ ಉದ್ಘಾಟನೆ ಮಾಡಿ ಬಿಜೆಪಿಯ ದ್ವಿಮುಖ ನೀತಿಯನ್ನು ಖಂಡಿಸಿದರು.
ನವೀನಚಂದ್ರ ಸುವರ್ಣ, ದೀಪಕ್ ಕೋಟ್ಯಾನ್, ಎಂ. ಜಿ. ಹೆಗ್ಡೆ, ಸರ್ಪುದ್ದೀನ್ ಶೇಖ್, ಜಿ. ಪುರ್ತಾಡೋ, ಶೇಖಬ್ಬ ಮೊದಲಾದವರು ಪಂಜು ಹಿಡಿದು ನಡೆದರು.