ಇಂದು ಟೀವಿಗೆ ಸಂದರ್ಶನ ನೀಡಿದ ಪಂಜಾಬಿನ ‌ಮಾಜೀ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ನಾನು ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ, ಆದರೆ ಬಿಜೆಪಿ ಸೇರುವುದಿಲ್ಲ ಎಂದರು.

ನಾನು 54 ವರುಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ನನಗೆ ಬೆಳಿಗ್ಗೆ ರಾಜೀನಾಮೆ ನೀಡಲು ಫೋನಿನಲ್ಲಿ ಹೇಳಿದರು. ತಡಮಾಡದೆ ರಾಜೀನಾಮೆ ಬಿಸಾಕಿದೆ. ಮೊನ್ನೆ ಬಂದವರ ಮಾತು ಕೇಳಿ ಹಿರಿಯರನ್ನು ಹೀಗೆ ನಡೆಸಿಕೊಂಡರೆ ಹೇಗೆ? ಆದ್ದರಿಂದ ಬೇಗನೆ ಕಾಂಗ್ರೆಸ್‌ನಿಂದ ಹೊರ ಹೋಗುತ್ತೇನೆ ಎಂದು ಅವರು ತಿಳಿಸಿದರು.