ಗುಜರಾತ್ ರಾಜ್ಯದ ಸೂರತ್ ನಗರದ ಭುವನೇಶ್ವರಿ ನಗರ ನಿವಾಸಿ ಕಿಶೋರ್ ಭಾಯಿ ಸಾಳುಂಕೆಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆಗೆ ಸಂಪರ್ಕ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ.

ಫ್ಯಾಶನ್ ವ್ಯವಹಾರದ ಕಿಶೋರ್ ಭಾಯಿ ಸೇನಾ ರಹಸ್ಯಗಳನ್ನು ಪಾಕಿಸ್ತಾನದ ಏಜೆಂಟರಿಗೆ ನೀಡಿರುವ ಮಾಹಿತಿ ಇದೆ. ಪೂನಾದ ದಕ್ಷಿಣ ಸೇನಾ ಕಮಾಂಡ್ ಬೇಹುಗಾರಿಕಾ ಸೂಚನೆಯಂತೆ ಸೂರತ್‌ನಲ್ಲಿ ಕಿಶೋರ್ ಬಂಧನವಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಗುಜರಾತಿನ ಎಸ್‌ಓಜಿ ವಿಶೇಷ ತನಿಖಾ ದಳಕ್ಕೆ ಒಪ್ಪಿಸಲಾಗಿದೆ.