ರಕ್ಷಣಾ ಸಚಿವರು ಸಂಸತ್ತಿನಲ್ಲಿ ತವಾಂಗ್ ಬಳಿಯ ಗಡಿ ಗಲಾಟೆಯಲ್ಲಿ ಭಾರತೀಯ ಸೈನಿಕರು ಯಾರಿಗೂ ಹೇಳಿಕೊಳ್ಳುವಂತಾ ಗಾಯವಾಗಿಲ್ಲ ಹೇಳಿಕೆ ನೀಡಿದರೆ,  ಸ್ಥಳೀಯ ಬಿಜೆಪಿ ಸಂಸದ ತಾಪಿರ್ ಗಾವೋ‌ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ಅರುಣಾಚಲ ಪೂರ್ವ ಕ್ಷೇತ್ರದ ಸಂಸದ ಗಾವೋ ಅವರು ತವಾಂಗ್ ಎಲ್‌ಎಸಿ ಬಳಿಯ ಗಡಿ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಗಾಯಗೊಂಡಿದ್ದಾರೆ. 6 ಮಂದಿ ತೀವ್ರ ‌ಗಾಯಗೊಂಡಿದ್ದು ಅವರನ್ನು ಹೆಲಿಕಾಪ್ಟರ್‌ನಲ್ಲಿ ಅಸ್ಸಾಮದ ಗೌಹಾತಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದರು.

ರಕ್ಷಣಾ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ,  ಸರಕಾರವು ಸಂಸತ್ತಿಗೆ ಪ್ರಾಮಾಣಿಕ ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳವರು ಒತ್ತಾಯ ಮಾಡಿದರು. ಪ್ರಧಾನಿ ಮೋದಿಯವರು ಹಾಜರಾಗಿ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳವರು ನಿಲುವಳಿ ಸೂಚನೆ ತಂದರೂ ಅದಕ್ಕೆ ಮನ್ನಣೆ ಸಿಗಲಿಲ್ಲ.