ಹಳೆಯಂಗಡಿ: ದೇವಸ್ಥಾನದ ಸಮಗ್ರ ಜರ್ಣೋದ್ಧಾರದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿಯ ಶ್ರೀ ಸುಬ್ರಹ್ಮಣ್ಯ ದೇವರ ನವೀಕೃತ ಗರ್ಭಗುಡಿಯ ಮರ ಜೋಡಿಸುವ ಕೆಲಸ ದಿನಾಂಕ 14-12-2022 ರಂದು ಬೆಳಿಗ್ಗೆ 9-00 ಕ್ಕೆ ನಡೆಯಲಿರುವುದು. ಇದರ ಪೂರ್ವಭಾವಿಯಾಗಿ ದಿನಾಂಕ 13.12.2022ರ ಸಂಜೆ ಗಂಟೆ 5.30ಕ್ಕೆ ದೇವಸ್ಥಾನದ ಪ್ರಧಾನ ಅರ್ಚಕರಾದ ಮಧುಸೂದನ್ ಆಚಾರ್ ದೇವರಲ್ಲಿ ಪ್ರಾರ್ಥಿಸಿ ಮರದ ಕೆತ್ತನೆಯ ಕಾಷ್ಠ ಶಿಲ್ಪಿಗಳಾದ, ನಾರಾಯಣ ಆಚಾರ್ಯ ಕಲ್ಲಮುಂಡ್ಕೂರು, ವಿಶ್ವನಾಥ ಆಚಾರ್ಯ ಬಜಗೋಳಿ, ಇವರಿಗೆ ಪ್ರಸಾದ ನೀಡಿದರು.


ಕಾಷ್ಠ ಶಿಲ್ಪಿಗಳು ಕುತ್ತಿ ಪೂಜೆ ನೆರವೇರಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್, ಸಮಿತಿ ಸದಸ್ಯರಾದ ಪುರುಷೋತ್ತಮರಾವ್, ಲೋಕಯ್ಯ ಸಾಲಿಯನ್, ವಿಜಯ್ ಕುಮಾರ್ ರೈ, ಯೋಗೀಶ್ ಕೋಟ್ಯಾನ್, ವಿಶ್ವನಾಥ್, ವಿಪುಲಾ ಡಿ. ಶೆಟ್ಟಿಗಾರ್, ಶಾರದಾ ಜಿ ಬಂಗೇರ, ದೇವಸ್ಥಾನದ ಸಿಬ್ಬಂದಿ ವರ್ಗ, ಊರ ಪರವೂರ ಭಕ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.