ಶಂಕರಪುರ: ಸಂತ ಜೋನ್ ಇವೆಂಜೆಲಿಸ್ಟ್ ದೇವಾಲಯ ಶಂಕರಪುರ ಉಡುಪಿ ಧರ್ಮಪ್ರಾಂತ್ಯ ಇದರ, ಶತಮಾನದ ಸಂಭ್ರಮದ ಮಹಾ ಅನ್ನಸಂತರ್ಪಣೆಗಾಗಿ ಹೊರೆಕಾಣಿಕೆಯ ಮೆರವಣಿಗೆಯನ್ನು ಮಾಡಿದರು. ಚರ್ಚ್ ನ ಧರ್ಮಗುರುಗಳಾದ ಫಾ. ಫರ್ಡಿನಾಲ್ಡ್ ಗೊನ್ಸಾಲ್ವಿಸ್ ಅವರು ಹೊರೆ ಕಾಣಿಕೆ ಮೆರವಣಿಗೆಯ ಅದ್ಭುತ ಚಾಲನೆಯನ್ನು ನೀಡಿದರು.






ಇದೇ ತಿಂಗಳ 15 ರಂದು ನಡೆಯಲಿರುವ ಮಹಾ ಅನ್ನಸಂತರ್ಪಣೆಗೆ ಈ ಹೊರೆಕಾಣಿಕೆ ಮೆರವಣಿಗೆ ನಡೆದದ್ದು ಒಂದು ಸಾಧನೆಯನ್ನು ನುಡಿದಿದೆ. ಈ ಅದ್ಭುತ ಹೊರೆ ಕಾಣಿಕೆಗೆ ಶಂಕರಪುರ ಚರ್ಚ್ ನ ಸರ್ವ ಧರ್ಮದ ಭಾಂಧವರು ಹೊರೆ ಕಾಣಿಕೆಯನ್ನು ನೀಡಿ ಸಹಕರಿಸಿದರು.