ಅಬ್ಬಾ ಮುಂದೊಂದು ದಿನ ನಗು ಅಂದರೆ ಏನು ಅಂತಾ ಕೇಳುವ ಸ್ಥಿತಿಗೆ ಬರತ್ತೀವೇನೋ ನಾವುಗಳು ಅಲ್ವಾ ಯಾಕೆಂದ್ರೆ ನಮಗೆ ಸಮಯವೇ ಇಲ್ಲ ಅದೆಷ್ಟು ಒತ್ತಡದ ಬದುಕನ್ನ ಬದುಕತ್ತಿದ್ದೀವೀ ಅಂದರೆ ಮನೆಯವರ ಜೊತೆಗೆ ಮನಸ್ಸು ಬಿಚ್ಚಿ ಮಾತಾಡಲ್ಲ ನಾವು ಮಾತಾನಾಡೋದು ನಗೋದು ಸೋಷಲ್ ಮೀಡಿಯಾದಲ್ಲಿ ಇಮೋಜಿ ಅಲ್ಲೇ ಮತ್ತೇ ಪುರುಸೊತ್ತಿಲ್ಲ ಎಂದರೂ ಆಶ್ಚರ್ಯವಾಗದು.ಸದಾ ನಗುತ್ತಿರುವವರು ಆರೋಗ್ಯಪೂರ್ಣರಂತೆ ಗೋಚರಿಸುತ್ತಾರೆ.ನಗು ಒಂದು ರೀತಿಯ ಒತ್ತಡ ನಿವಾರಕವೂ ಹೌದು ದೇಹಕ್ಕೆ ವ್ಯಾಯಾಮ ಹೌದು.

ನಗುತ್ತಿರುವಾಗ ಒಬ್ಬ ವ್ಯಕ್ತಿಯ ಹೃದತದ ಬಡಿತ ನಿಮಿಷಕ್ಕೆ 120 ತಲುಪುತ್ತದೆ. ನಗುವಿನಿಂದ ನಮ್ಮ ರಕ್ತದ ಒತ್ತಡ ಕಡಿಮೆ ಆಗಿ ರಕ್ತ ಪರಿಚಲನೆ ಹೆಚ್ಚುತ್ತದೆ .ನಗುವಿನಿಂದ ಮಾಂಸಖಂಡ ಕುತ್ತಿಗೆಯ ನರಗಳ ಬಿಗಿತ ಕಡಿಮೆಯಾಗುತ್ತದೆ.ನಗು ಶಾಸ್ವಕೋಶವನ್ನು ಹಿಗ್ಗಿಸಿ ರಕ್ತದಲ್ಲಿ ಆಮ್ಲಜನಕ ವೃದ್ಧಿಯಾಗುವಂತೇ ಮಾಡುತ್ತದೆ ಹಾಗೆಯೇ ಶ್ವಾಸನಾಳಗಳನ್ನು ಸ್ವಚ್ಛಗೊಳಿಸುತ್ತದೆ.ನಗುವುದರಿಂದ ನಮ್ಮ ಮಿದುಳಿನಲ್ಲಿ ಎಂಡಾರ್ಫಿನ್ ಗಳೆಂಬ ನರವಾಹಗಳು ಬಿಡುಗಡೆಯಾಗುತ್ತದೆ.ಎಂಡಾರ್ಫಿನ್ ಗಳು ಯಾವುದೇ ಅಡ್ಡ ಪರಿಣಾಮ ಉಂಟು ಮಾಡದೇ ನಮ್ಮನ್ನು ನಿದ್ರಾಸ್ಥಿತಿಗೆ ಒಯ್ಯತ್ತವೆ.ನಗು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಸಮಾಧಾನ ನೀಡುತ್ತದೆ.ನಗುವಿನಲ್ಲಿ ಏನೋ ಒಂದು ರೀತಿಯ ಶಕ್ತಿ ಇದೆ.ನಗುವನ್ನು ಚಿಕಿತ್ಸೆಯಾಗಿ ಬಳಸಬಹುದು ಎಂದು ಪ್ರೊಫೆಸರ್ ಮಾರ್ಕೊ ಸಫಿ ಸಲಹೆ ನೀಡಿದ್ದಾರೆ. "ಹೃದಯ ಕಾಯಿಲೆ ಇರುವ ಜನರನ್ನು ಹಾಸ್ಯ ಸಂಜೆಗಳಿಗೆ ಆಹ್ವಾನಿಸಬಹುದು ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮೋಜಿನ ಸಂಜೆಗಳನ್ನು ಆನಂದಿಸಲು ಪ್ರೋತ್ಸಾಹಿಸಬಹುದು" ಎಂದು ಅವರು ಹೇಳುತ್ತಾರೆ.ಡಾ. ಆನೆಟ್ ಗುಡ್‌ಹಾರ್ಟ್ ಅವರ ಪುಸ್ತಕ, "ಲಾಫ್ಟರ್ ಥೆರಪಿ" ನಲ್ಲಿ, ಇಡೀ ಅಧ್ಯಾಯವು ನಗುವಿನ ಭೌತಿಕ ಪ್ರಯೋಜನಗಳಿಗೆ ಸಮರ್ಪಿಸಲಾಗಿದೆ, ಏಕೆಂದರೆ ಇದು ದೇಹದಲ್ಲಿನ ಪ್ರತಿಯೊಂದು ಪ್ರಮುಖ ವ್ಯವಸ್ಥೆಯನ್ನು ತೊಡಗಿಸುತ್ತದೆ.

ನಗು ನಮ್ಮ ಮುಖದ ತೇಜಸ್ಸನ್ನು ಹೆಚ್ಚಿಸುತ್ತದೆ ನಗುವಿನಿಂದ ನಾವು ಜನರ ಪ್ರೀತಿ ಪ್ರೇಮವನ್ನು ಹೆಚ್ಚು ಸಂಪಾದಿಸಿಕೊಳ್ಳಬಹುದು.ನಾವು ನಗದೇ ಇದ್ದ ದಿನ ನಷ್ಟವಾದ ದಿನವೇ ಸರಿ.ಪ್ರತಿಯೊಬ್ಬರು ತಮ್ಮ ಸಿಡುಕು ಸ್ವಭಾವವನ್ನು ಕಡಿಮೆ ಮಾಡಿ ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಖಂಡಿತವಾಗಿ ತಮ್ಮ ಆರೋಗ್ಯವನ್ನು ಉತ್ತಮಪಡಿಸಬಹುದು. ನಗುವುದೇ ಸ್ವರ್ಗ ಅಳುವುದೇ ನರಕ ಎಂದಿದ್ದಾರೆ ಆದ್ದರಿಂದ ಬಾಳಿನುದ್ದಕ್ಕೂ ನಾವು ನಗುತ್ತಲೇ ಇದ್ದು ನಮ್ಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳೋಣ.

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ । ನಗುವ ಕೇಳುತ ನಗುವುದತಿಶಯದ ಧರ್ಮ ॥ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ । ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ॥


ರೇಷ್ಮಾ