ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವ ಕೊಡಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ.  ಅಂದ ಹೆಚ್ಚಿಸುವ ಮೂಗುತಿ ಆರೋಗ್ಯವು ವೃದ್ಧಿತ್ತದೆ.ಮೂಗುತಿ ಎಂದರೆ ಮೂಗು ಮೂರಿಯುವವರುಂಟು ಮೂಗು ಚುಚ್ಚಿಸಿಕೊಂಡರೆ ಅಸಹ್ಯ ಕಾಣತಿವೆನೊ ಅಂತ ಯೋಚಿಸುವವರು ಇದ್ದಾರೆ ಅದಕ್ಕೆಂದೆ ಆರ್ಟಿಫಿಸಿಯಲ್ ಮೂಗುತಿ ಹಾಕಿದರಾಯಿತು  ಬೇಕಾದಾಗ ಹಾಕಿಕೊಳ್ಳಬಹುದಲ್ಲವೇ ಸುಮ್ಮನೆ ಯಾಕೆ ನೋವು ಪಡಬೇಕೆಂದು ನಮ್ಮ ಯುವ ಜನತೆಯರಲ್ಲೂ ಯೋಚನೆ ಬಂದಿರುತ್ತದೆ.ಹಾಗಾದರೆ ಈಗ ಮೂಗುತಿ ಬಗ್ಗೆ ತಿಳಿದುಕೊಳ್ಳೊಣ.

ಸ್ತ್ರೀಯರಲ್ಲಿ ಹಠ ಚಂಚಲತೆ  ನಿರ್ಗಹಿಸುವುದು  ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಅಷ್ಟೆ ಅಲ್ಲದೆ, ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ ಉಪಚಾರವಾಗುವುದರಿಂದ ಅಲ್ಲಿನ ಋಣಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಇದಲ್ಲದೆ, ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳೂ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿಯೇ ಯುವತಿಯರು ಋತುಮತಿ ಯಾದ ಬಳಿಕ ಅವರಿಗೆ ಮೂಗು ಚುಚ್ಚಿಸುತ್ತಾರೆ.

ಆಯುರ್ವೇದ ಪದ್ಧತಿಯಲ್ಲಿ ಮೂಗುತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆಯೆಂದು ಹೇಳಲಾಗಿದೆ. ಮೂಗಿನ ಹೊಳ್ಳೆಯ ಬಳಿ ಮೂಗುತಿ ಧರಿಸುವುದರಿಂದ ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಆದ್ದರಿಂದ ಹುಡುಗಿಯರಿಗೆ ಹಾಗೂ ವಯಸ್ಕ ಮಹಿಳೆಯರಿಗೆ ಮೂಗನ್ನು ಚುಚ್ಚಲಾಗುತ್ತದೆ ಎಂದು ಹೇಳಲಾಗಿದೆ. ಎಡ ಮೂಗಿನ ಹೊಳ್ಳೆಯಿಂದ ಹಾದುಹೋಗುವ ನಿರ್ದಿಷ್ಟ ನರಗಳು ಸ್ತ್ರೀ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧವನ್ನು ಹೊಂದಿದ್ದು, ಇದು ಸ್ತ್ರೀಗೆ ಹೆರಿಗೆಗೆ ಸಹಕಾರಿ ಎನ್ನಲಾಗಿದೆ.

ಕುದರೆಗೆ ಮೂಗದಾರ ಹಾಕಿದಂತೆ ಹೆಣ್ಣಿಗೆ ಹಠ ಕೋಪ ಚಂಚಲತೆಯ ನಿಗ್ರಹಿಸಲು ಮೂಗುತಿ ಹಾಕಿತ್ತಾರೆಂದು ಹೇಳತ್ತಾರೆ. ಅವಳ ಮನಸ್ಸು ಸ್ಥಿರವಾಗಿರಿಸಲು ಸಹಾಯಕ ಮೂಗಿಗೆ ಧರಿಸುವ ಈ ವಿಶೇಷ ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯುಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ. ಮೂಗುತಿ ಚುಚ್ಚಿಸುವ ಸಂಪ್ರದಾಯ ಪಾರ್ವತಿಯನ್ನು ಆರಾಧನೆ ಇತ್ತೀಚೆಗೆ ಮೂಗುತಿ ಟ್ರೆಂಡಿಯಾಗಿದೆ ಬೇರೆ ವಿನ್ಯಾಸದ ಮೂಗುತಿ ಮಾರುಕಟ್ಟೆಯಲ್ಲಿ ಕೂಡ ದೊರೆಯುತ್ತದೆ. 

✍ ಅಂಜಲಿ ಶ್ರೀನಿವಾಸ