ಇವಾಗೀನ ಮಕ್ಕಳ ಹತ್ತಿರ ಯಾರಾದರೂ ನಿನ್ನ ಹವ್ಯಾಸವೇನು ಕೇಳಿದರೆ  ರೀಲ್ಸ್ ಮಾಡೋದು  ಅಂತಾರೆ ಅದೇ ಆಂಟಿ ಅಂಕಲ್ ಕೇಳಿದರೆ ಸೀರಿಯಲ್ ನೋಡೋದು ಅಂತಾರೆ  ಟಿವಿ  ಮೊಬೈಲ್ ನೋಡೋದು ಬಿಟ್ಟು ಬೇರೆ ನಮಗೆ ನೆನಪು ಆಗಲ್ಲಾ ಆಗೋದಕ್ಕೂ ಸಮಯನೂ ಇಲ್ಲ  ಇನ್ನೂ ಕೆಲವರಿಗೆ ರೀಲ್ಸ್ ಮಾಡೋದು ವೃತ್ತಿನೂ ಆಗುತ್ತಿದೆ.ಮೊಬೈಲ್ ಬರುವ ಮುಂಚೆ ಆಟದ ಮೈದಾನದಲ್ಲಿ ಎಲ್ಲಾರೂ ಆಟ ಆಡುತ್ತಿದ್ದರು.ಬೋರ್ ಆಗುತ್ತದೆ ಅನ್ನುವವರು ಹೆಚ್ಚು ಜನರು ಇದ್ದಾರೆ ಆದರೆ ಪುಸ್ತಕ ಓದಿ ಅಂದರೆ ಸಮಯವಿಲ್ಲ ಅಂತಾರೆ ಮೊಬೈಲ್ನ್ ನೋಡಲು ಕಳೆಯುವ ಸ್ವಲ್ಪ ಸಮಯದಲ್ಲಿ ನಾವು ಬೇರೆ ಹವ್ಯಾಸಗಳನ್ನ ರೂಪಿಸಿಕೊಳ್ಳಬಹುದು. 

ಹವ್ಯಾಸ ಅಂದರೆ ಯಾವುದೇ ವಿಷಯದಲ್ಲಿ ನಮ್ಮನ್ನು ನಾವು ಬಿಡದೆ ತೊಡಗಿಸಿಕೊಳ್ಳುವುದು ಮತ್ತು ಅದನ್ನು ರೂಢಿ ಮಾಡಿಕೊಳ್ಳುವುದು.ಹವ್ಯಾಸಗಳು ಕೆಲವರಿಗೆ ಪ್ರವೃತಿ ಆದರೆ ಇನ್ನೂ ಕೆಲವರಿಗೆ ವೃತಿಗಳಾಗುತ್ತದೆ.

ಹವ್ಯಾಸಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಏಕೆಂದರೆ ಇದು ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ ಮತ್ತು ಉತ್ಪಾದಕವಾಗಿ ಸಮಯವನ್ನು ಕಳೆಯುವ ಅವಕಾಶದೊಂದಿಗೆ ನಮ್ಮನ್ನು ಶ್ರೀಮಂತಗೊಳಿಸುತ್ತದೆ. ಹವ್ಯಾಸವನ್ನು ಅಭಿವೃದ್ಧಿಪಡಿಸುವುದು ನಮ್ಮ ಜೀವನವನ್ನು ಆನಂದದಾಯಕ ಮತ್ತು ಸಾರ್ಥಕಗೊಳಿಸುತ್ತದೆ.

ಹವ್ಯಾಸಗಳಲ್ಲಿ ಎರೆಡು ರೀತಿಯ ಹವ್ಯಾಸಗಳಿದೆ ಒಂದು ಒಳ್ಳೆಯ ಹವ್ಯಾಸ ಅಂದರೆ ಆಟ ಆಡುವುದು ಪುಸ್ತಕ ಓದುವುದು ಚಿತ್ರಬಿಡಿಸುವುದು ಬರೆಯುವುದು ಹೂದೋಟ ಮಾಡುವುದು ಮುಂತಾದ ಆರೋಗ್ಯಕರವಾದ ಹವ್ಯಾಸಗಳು ಇನ್ನೊಂದು ಕೆಟ್ಟ ಹವ್ಯಾಸಗಳು ಇನ್ನೊಬ್ಬರಿಗೆ ಕಾಟ ಕೊಡುವುದು ತೊಂದರೆ ಕೊಡುವುದು ಮದ್ಯ ತಂಬಾಕನ್ನು ಸೇವಿಸುವುದು ಮುಂತಾದವುಗಳು .ಹವ್ಯಾಸವು ಒತ್ತಡ ಪರಿಹಾರ, ವರ್ಧಿತ

ಸೃಜನಶೀಲತೆ ಮತ್ತು ಸುಧಾರಿತ ಮಾನಸಿಕ ಆರೋಗ್ಯ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಸಂತೋಷ ಮತ್ತು ತೃಪ್ತಿಯನ್ನು ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು

ಹೆಚ್ಚು ಸಮತೋಲಿತ ಮತ್ತು ತೃಪ್ತಿಕರ ಜೀವನವನ್ನು ನಡೆಸಬಹುದು.

ಕ್ರೇಗ್ W. ಬೇರ್ಡ್ ಅವರು  ನೀವು ಅನುಭವಿಸುವ ಒತ್ತಡವನ್ನು ಕಡಿಮೆ ಮಾಡಲು ಹವ್ಯಾಸವನ್ನು ಹೊಂದಿರುವುದು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ .ನಾವು  ಕೆಲಸದ ಒತ್ತಡದಲ್ಲಿ ಬದುಕಿನ ಒತ್ತಡದಲ್ಲಿ  ಇದ್ದಾಗ ನಾವು ಸ್ವಲ್ಪ ಸಮಯವನ್ನು ನಮಗೆ ಇಷ್ಟವಾಗುವುದರಲ್ಲಿ ಕಳೆದರೆ ಮನುಸ್ಸನಲ್ಲಿ ಒತ್ತಡ ಕಡಿಮೆಯಾಗುತ್ತದೆ.ಅದೇ ದೈಹಿಕವಾದ ಹವ್ಯಾಸಗಳಾದ ಕ್ರೀಡೆಗಳು ವ್ಯಾಯಾಮ ಯೋಗಗಳಿದ್ದರೆ ದೇಹವು ಆರೋಗ್ಯವಾಗಿರುವಂತೆ ಮಾಡುತ್ತದೆ.ನಿಮ್ಮನ್ನು ಸಂತೋಷಪಡಿಸುವ ಚಟುವಟಿಕೆಗಳನ್ನು ಮಾಡಲು ನೀವು ಸಮಯವನ್ನು ತೆಗೆದುಕೊಂಡಾಗ, ಅದು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ .ಪ್ರಾಣೇಶವರು ಯಾವಾಗಲೂ ಟಿ.ವಿ ನೋಡುತ್ತಿರುವವರು ಟಿ‌.ವಿ ಒಳಗೆ ಯಾವುತ್ತೂ ಬರೋದಿಲ್ಲ ನಾನು ಪುಸ್ತಕ ಓದುತ್ತಿದ್ದೆ ಹಾಗಾಗಿ ವಾಗ್ಮಿ ಆಗಿದ್ದು ತಲೆ ತಗ್ಗಿಸಿ ಪುಸ್ತಕ ಓದಿದರೆ ತಲೆ ಎತ್ತುವಂತೆ ಮಾಡುತ್ತದೆ ಹಾಗೇಯೇ ತಲೆಯಲ್ಲಿ ಜ್ಞಾನ ತುಂಬಿದ್ದರೆ ಮಾತ್ರ ವಾಗ್ಮಿ ಆಗಬಹುದು ಅನ್ನುತ್ತಿದ್ದರು.ಒಳ್ಳೆಯ ಹವ್ಯಾಸಗಳನ್ನ ರೂಢಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದಿಗೂ ಒಳ್ಳೆಯ ಹವ್ಯಾಸಗಳು ನೆಮ್ಮದಿಯ ತಾಣಗಳೇ.