ಕರಾವಳಿಯಲ್ಲಿ ಭಾರೀ ಮಳೆ ಆಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಅಧಿಕ ಮಳೆ ಮತ್ತು ಅಪಾರ ಹಾನಿ ಆಗಿದೆ, ನೀರೆಯಲ್ಲಿ ಒಬ್ಬರು ಸಿಡಿಲು ಬಡಿದು ಸತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸರಾಸರಿ 47.5 ಮಿಲಿಮೀಟರ್ ಮಳೆ ಆಗಿದ್ದರೆ, ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ 10.9 ಸೆಂಟಿಮೀಟರ್ ಮಳೆಯಾಗಿದೆ. ಕಾರ್ಕಳ ಬಳಿಯ ನೀರೆಯಲ್ಲಿ 65ರ ವಾದಿರಾಜ ಆಚಾರ್ಯ ಎನ್ನುವವರು ಸಿಡಿಲು ಬಡಿದು ಮಡಿದಿದ್ದಾರೆ.

ಕೇರಳದಲ್ಲಿ ನಿನ್ನೆಯ ಮಳೆಯಲ್ಲಿ ಇಬ್ಬರು ಮಕ್ಕಳ ಸಹಿತ ಮೂವರ ಸಾವಾಗಿದೆ. ಇನ್ನೂ ನಾಲ್ಕು ದಿನ ಮಳೆಯ ಸೂಚನೆ ಇದೆ. ಇತರ ಹಾನಿಯೊಂದಿಗೆ ಬೆಳೆದು ನಿಂತ ಭತ್ತ ಕಟಾವು ಆಗದಿರುವುದು ಹಲವರ ಚಿಂತೆಯಾಗಿದೆ.