ಇಗರ್ಜಿಗಳ ಸಮೀಕ್ಷೆ ಸಂಬಂಧ ಕರ್ನಾಟಕದ ಪಿಯುಸಿಎಲ್- ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರಕಾರಕ್ಕೆ ನೋಟೀಸು ಜಾರಿ ಮಾಡಿತು. ಇತ್ತೀಚೆಗೆ ಕರ್ನಾಟಕ ಸರಕಾರವು ಚರ್ಚ್ ಸಮೀಕ್ಷೆಗೆ ಆದೇಶಿಸಿತ್ತು.

ಕ್ರಿಶ್ಚಿಯನರನ್ನು ಗುರಿಯಾಗಿಸಿ ಈ ಆದೇಶ ಮಾಡಲಾಗಿದ್ದು, ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ 41, 21 ಮೊದಲಾದ ವಿಧಿಗಳ ಸ್ವಾತಂತ್ರ್ಯ ಹರಣ ಈ ಆದೇಶವಾಗಿದೆ. ಚರ್ಚ್‌ಗಳ ಸಮೀಕ್ಷೆ ಯಾಕೆ, ಬಿಜೆಪಿ ಸರಕಾರದ ಉದ್ದೇಶ ಸರಿಯಿಲ್ಲ. ಭೂಮಿ, ಜಾಗ, ಕಟ್ಟಡ ಎಂದು ಕ್ರಿಶ್ಚಿಯನರಿಗೆ ತೊಂದರೆ ಕೊಡುವ ಏಕೈಕ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.