ಲಾಸ್ಏಂಜಲ್ಸ್ ಬಳಿಯ ಇಡಾಹದ ಮಾಲ್ ಒಂದರಲ್ಲಿ ದುಷ್ಕರ್ಮಿಗಳು ಗುಂಡಿಕ್ಕುವಿಕೆಯನ್ನು ಪೋಲೀಸರು ಪ್ರತಿ ಗುಂಡಿನಿಂದ ಹತ್ತಿಕ್ಕಿದರು. ಆದರೆ ಅಷ್ಟರಲ್ಲಿ ಇಬ್ಬರ ಸಾವಾಗಿದೆ, ಒಬ್ಬ ಪೋಲೀಸು ಅಧಿಕಾರಿ ಸಹಿತ ನಾಲ್ವರು ಗಾಯಗೊಂಡರು ಎಂದು ಪೋಲೀಸು ಅಧಿಕಾರಿ ರಿಯಾನ್ ಲೀ ತಿಳಿಸಿದರು.

ಸದರಿ ಮಾಲ್‌ನಲ್ಲಿ 150ಕ್ಕೂ ಹೆಚ್ಚು ಅಂಗಡಿಗಳು, ರೆಸ್ಟೋರೆಂಟ್ ಇತ್ಯಾದಿ ಇರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಒಬ್ಬನನ್ನು ವಶಕ್ಕೆ ತೆಗೆದುಕೊಂಡ ಪೋಲೀಸರು ತನಿಖೆ ನಡೆಸಿದ್ದಾರೆ.